ಬೆಳಗಾವಿ : ವಿಧಾನಸಭೆಯ ಅಧಿವೇಶನದಲ್ಲಿ *ಜಂಗಮ ಸಮಾಜದ ಆರ್ಥಿಕ ಸಂಕಷ್ಟಗಳನ್ನು* ಎಳೆಎಳೆಯಾಗಿ ಬಿಚ್ಚಿಟ್ಟು, ಸಮಾಜದ ಏಳಿಗೆಗಾಗಿ *”ಜಂಗಮ ಅಭಿವೃದ್ಧಿ ನಿಗಮ”* ಸ್ಥಾಪಿಸಬೇಕೆಂದು ಪ್ರಬಲವಾಗಿ ಒತ್ತಾಯಿಸಿದ ಕಲಬುರಗಿ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕ *ಶ್ರೀ ಅಲ್ಲಮಪ್ರಭು ಪಾಟೀಲ್* ಅವರ ನಡೆ ಅತ್ಯಂತ ಸ್ತುತ್ಯಾರ್ಹ ಮತ್ತು ಐತಿಹಾಸಿಕ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ನಿರ್ದೇಶಕರು ಹಾಗೂ ಜಂಗಮ ಸಮಾಜದ ಮುಖಂಡರಾದ *ಡಾ. ಸಂಜಯ ಹೊಸಮಠ ಅವರು ಪ್ರಶಂಸಿಸಿದ್ದಾರೆ.* ಈ …
Read More »2028 ರಲ್ಲಿ ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- 2028 ರಲ್ಲಿ ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಸಂಜೆ ಇಲ್ಲಿನ ಹೊರ ವಲಯದ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಅರಭಾವಿ ಬಿಜೆಪಿ ಮಂಡಲವು ಹಮ್ಮಿಕೊಂಡ ಪಂ. ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರ ಆಶೀರ್ವಾದದೊಂದಿಗೆ ಬಿಜೆಪಿ …
Read More »ಮತ್ತೊಬ್ಬರ ಕುರಿತು ಸಹನೆ ಮತ್ತು ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ : ನ್ಯಾಯಾಧೀಶರು ಚೈತ್ರಾ ಕುಲಕರ್ಣಿ
ಗೋಕಾಕ : ಮತ್ತೊಬ್ಬರ ಕುರಿತು ಸಹನೆ ಮತ್ತು ಅತ್ಯಂತ ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ ಎಂದು ಇಲ್ಲಿನ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಚೈತ್ರಾ ಕುಲಕರ್ಣಿ ಅರ್ಥೈಸಿದರು. ಶುಕ್ರವಾರ ಸಂಜೆ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಸಿಲಾಗಿದ್ದ ʼಅಂತರಾಷ್ಟ್ರೀಯ ಮಹಿಳಾ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆʼಯನ್ನು ಪುರುಷರೊಂದಿಗೆ ಹೋಲಿಕೆ ಮಾಡಿದಾಗ ಅವಳು ನೈಸರ್ಗಿಕ ಕಾರಣಗಳಿಂದಾಗಿ ದುರ್ಬಲಳೇ ಹೊರತು ಮತ್ಯಾವುದೇ ಕಾರಣಗಳಿಂದಲ್ಲ ಎಂದು ಪ್ರತಿಪಾದಿಸಿದರು. ಪ್ರಸ್ತುತವಾಗಿ ಪ್ರಪಂಚದಲ್ಲಿ …
Read More »ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಎಲ್ಲ ಸಮಾಜಗಳನ್ನು ಒಂದುಗೂಡಿಸಿಕೊಂಡು ಯಾವೊಂದು ಸಮಾಜಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಬುಧವಾರದಂದು ತಾಲ್ಲೂಕಿನ ತಳಕಟ್ನಾಳ ಗ್ರಾಮದಲ್ಲಿ ಸುಮಾರು 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ …
Read More »*ಗೋಕಾಕದಲ್ಲಿ ‘ಹಣ ಡಬ್ಲಿಂಗ್’ ದಂಧೆ: 7 ಜನರ ಬಂಧನ*
ಬೆಳಗಾವಿ: ಜಿಲ್ಲೆಯ ಗೋಕಾಕದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ದಂಧೆಯಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಬಂಧಿಸಲಾಗಿದೆ ಎಂದು ಎಸ್ಪಿ. ಕೆ. ರಾಮರಾಜನ್ ಹೇಳಿದರು. ಗೋಕಾಕದ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲದ ಮೇಲೆ ಗೋಕಾಕ ಶಹರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರನ್ನು ಪರಶುರಾಮ …
Read More »ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ, ಗೋಕಾಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ.
ಗೋಕಾಕ : ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಗೋಕಾಕ ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಅಭೂತಪೂರ್ವ ಜಯಗಳಿಸಿದ್ದಾರೆ. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಗೋಕಾಕ ಘಟಕದ ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ ರಾಮಪ್ಪ ಕುಂದರಗಿ, ಉಪಾಧ್ಯಕ್ಷರಾಗಿ ಯಲ್ಲಪ್ಪಾ ಬಾಳಪ್ಪಾ ಸನದಿ, ಕಾರ್ಯದರ್ಶಿಯಾಗಿ ಶ್ರೀಧರ ಶಿವಲಿಂಗ ತಳವಾರ, ಖಜಾಂಚಿಯಾಗಿ ಜಗದೀಶ ದಶರಥ ಬೆಳಗಲಿ, ನಿರ್ದೇಶಕರಾಗಿ ಬಸನಗೌಡ ಶಿವನಗೌಡ ಪಾಟೀಲ, ರಾಜು ಮುತ್ತಪ್ಪ ಪಾಟೀಲ, ಈರಪ್ಪ ಕಲ್ಲಪ್ಪ …
Read More »ಸಂಭವನೀಯ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಿ ; ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಗೋಕಾಕ್- ಬೇಸಿಗೆಯ ಸಮಯದಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗಳು ಬರದಂತೆ ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರದಂದು ತಾಲ್ಲೂಕಿನ ದುರದುಂಡಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಕರೆಯಲಾಗಿದ್ದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಭವನೀಯ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳಲು ಶಾಸಕರು ಸೂಚನೆಗಳನ್ನು ನೀಡಿದರು. ಈಗ ಆರಂಭವಾಗಿರುವ …
Read More »ಘಟಪ್ರಭಾ ನೂತನ ಸೇತುವೆ ಶೀಘ್ರ ಪೂರ್ಣಗೊಳಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ
ಬೆಳಗಾವಿ: ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯನ್ನು ನೆಲಸಮ ಮಾಡಲಾಗಿದ್ದು, ನೂತನ ಸೇತುವೆಯನ್ನು 45 ದಿನಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಗಂಭೀರ ಬಿರುಕು ಬಿಟ್ಟು ಪರಿನಾಮ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದರಿಂದ ಅದನ್ನು ನೆಲಸಮ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ …
Read More »ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ
ವರದಿ : ಸಿ ಎಲ್ ಖಡಕಭಾಂವಿ ಘಟಪ್ರಭಾ:ಪುರಸಭೆ ವ್ಯಾಪ್ತಿಯ ನೂತನ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ದುಪಧಾಳ ಶಾಲೆಯನ್ನು ಶಾಸಕ ರಮೇಶ ಜಾರಕಿಹೊಳಿರವರು ಮಂಗಳವಾರದಂದು ಉದ್ಘಾಟಿಸಿದರು. ಪುರಸಭೆ ಪಂಚಾಯತದಿಂದ ಎಸ್ ಎಫ್ ಸಿ ಯೋಜನೆಅಡಿಯಲ್ಲಿ ಫಲಾನುಭವಿಗಳಿಗೆ ಸೋಲಾರ್ ಹಾಗೂ ಹೊಲಿಗೆ ಯಂತ್ರಗಳು ಮತ್ತು ವಿಕಲ ಚೇತನರಿಗೆ ತ್ರೀಚಕ್ರ ಸೈಕಲ್ ಹಂಚಿದರು. ತದನಂತರ ಮಾತನಾಡಿದ ಕಳೆದ 25 ವರ್ಷಗಳಿಂದ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ …
Read More »ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ : ಗಸ್ತೆ
ಗೋಕಾಕ : ಎಸ್.ಎಸ್.ಎಲ್.ಸಿ ಫಲಿತಾಂಶದ ಸುಧಾರಣೆಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು. ಸೋಮವಾರದಂದು ನಗರದ ಮಯೂರ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗೋಕಾಕ ವತಿಯಿಂದ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ” ಮಿಸ್ ಕಾಲ್ ಮಾಡಿರಿ ಉತ್ತರ ಪಡೆಯಿರಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 11 ವರ್ಷಗಳಿಂದ ಈ …
Read More »
CKNEWSKANNADA / BRASTACHARDARSHAN CK NEWS KANNADA