ಒಟ್ಟು 2.45 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ತುಕ್ಕಾನಟ್ಟಿ ಗ್ರಾಮದ ಪ್ರಗತಿಗಾಗಿ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಜತೆಗೆ ರಸ್ತೆಗಳ ಅಭಿವೃದ್ಧಿಗೂ ಸಹ 2.40 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ತಂದಿದ್ದೇನೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಇತ್ತೀಚೆಗೆ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಒಟ್ಟು 2.45 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಗ್ರಾಮದ ಎಲ್ಲ ಹಿರಿಯರ ಆಶೀರ್ವಾದದಿಂದ ಪ್ರತಿ ಚುನಾವಣೆಯಲ್ಲಿ ನನಗೆ ಹರಿಸಿ, ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ಅವರ ಪ್ರೀತಿ, ಕಾಳಜಿಗೆ ನಾನು ಸದಾ ಚಿರ ಋಣಿಯಾಗಿದ್ದೇನೆ. ಮುಂದೆಯೂ ಸಹ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ತಿಳಿಸಿದರು.
*ಭಗೀರಥ ಜಯಂತಿಗೆ ಗಿಫ್ಟ್*- ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಭಗೀರಥ ಜಯಂತಿಗೆ ತುಕ್ಕಾನಟ್ಟಿ ಗ್ರಾಮಕ್ಕೆ ಸುಮಾರು 2.45 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಸಿಹಿಸುದ್ದಿ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಗ್ರಾಮದ ಮುಖಂಡರು ಸತ್ಕರಿಸಿ, ಗೌರವಿಸಿದರು.

*ಎಲ್ಲೆಲ್ಲಿ ಕಾಮಗಾರಿಗಳು*- ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಪರಿಶಿಷ್ಟ ಜಾತಿ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 25 ಲಕ್ಷ ರೂಪಾಯಿ ವೆಚ್ಚದಲ್ಲಿ ತುಕ್ಕಾನಟ್ಟಿ ಗ್ರಾಮದ ರಾಜಾಪೂರ ರಸ್ತೆಯಿಂದ ದುರ್ಗಾದೇವಿ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.
*ಆರ್ಡಿಪಿಆರ್ನಿಂದ 2.15 ಕೋಟಿ ರೂಪಾಯಿ*- ತುಕ್ಕಾನಟ್ಟಿ ಗ್ರಾಮದ ರಸ್ತೆಗಳ ಡಾಂಬರೀಕರಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2.15 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಈ ಕಾಮಗಾರಿಗೆ ಅವರು ಗುದ್ದಲಿಪೂಜೆ ನೆರವೇರಿಸಿದರು.
50 ಲಕ್ಷ ರೂಪಾಯಿ ವೆಚ್ಚದಲ್ಲಿ ತುಕ್ಕಾನಟ್ಟಿ ಗ್ರಾಮದ ಗದಾಡಿ ತೋಟದ ಕಾಲುವೆಯಿಂದ ಸತ್ತೆಪ್ಪ ಬಿಲಕಾರ ಮನೆಯವರೆಗೆ ಡಾಂಬರೀಕರಣ, 90 ಲಕ್ಷ ರೂಪಾಯಿ ವೆಚ್ಚದಲ್ಲಿ ವಡೇರಹಟ್ಟಿ ಕಾಲುವೆಯಿಂದ ಅರ್ಜುನ ಉಪ್ಪಾರ ವ್ಹಾಯಾ ಲಕ್ಷ್ಮಣ ಹುಲಕುಂದ ಮನೆತನಕ ರಸ್ತೆ ಡಾಂಬರೀಕರಣ, 75 ಲಕ್ಷ ರೂಪಾಯಿ ವೆಚ್ಚದಲ್ಲಿ ತುಕ್ಕಾನಟ್ಟಿ ಗ್ರಾಮದ ಘಟಪ್ರಭಾ ರಸ್ತೆಯಿಂದ ಮರ್ದಿ ( ಭೀಮಶೆಪ್ಪಗೋಳ) ಮನೆತನಕ ರಸ್ತೆ ಕಾಮಗಾರಿಗೆ ಒಟ್ಟು 2.15 ಕೋಟಿ ರೂಪಾಯಿ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ನಂತರ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ಶೆಲ್ಟರ್ ನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಸೋಮು ಹುಲಕುಂದ, ಅಜ್ಜಪ್ಪ ಮನ್ನಿಕೇರಿ, ಡಾ. ವಸಂತ ನಾಯಿಕವಾಡಿ, ಕುಮಾರ ಮರ್ದಿ, ಮಂಜುನಾಥ ಗದಾಡಿ, ರಾಮಪ್ಪ ಬಾಗೇವಾಡಿ, ಯಲ್ಲಪ್ಪ ಹುಲಕುಂದ, ಸತ್ತೆಪ್ಪ ಮಲ್ಲಾಪೂರ, ಸುನಂದಾ ಭಜಂತ್ರಿ, ಪರಶುರಾಮ ಗದಾಡಿ, ಲಗಮಪ್ಪ ಭೋಜ, ರಾಮಚಂದ್ರ ಮದಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
CKNEWSKANNADA / BRASTACHARDARSHAN CK NEWS KANNADA