ಗೋಕಾಕ : ಎಸ್.ಎಸ್.ಎಲ್.ಸಿ ಫಲಿತಾಂಶದ ಸುಧಾರಣೆಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು.
ಸೋಮವಾರದಂದು ನಗರದ ಮಯೂರ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗೋಕಾಕ ವತಿಯಿಂದ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ” ಮಿಸ್ ಕಾಲ್ ಮಾಡಿರಿ ಉತ್ತರ ಪಡೆಯಿರಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 11 ವರ್ಷಗಳಿಂದ ಈ ಕಾರ್ಯಕ್ರಮ ಅದೆ ಉತ್ಸಾಹದಿಂದ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಲಕರು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸವಾಲಿನ ಕಾರ್ಯವಾಗಿರುತ್ತದೆ.ಯಾವುದೇ ಕಾರ್ಯದಲ್ಲಿ ಯಾರು ಪರಿಪೂರ್ಣರಲ್ಲ, ಇಂತಹ ವಿನೂತನ ಕಾರ್ಯಕ್ರಮಗಳು ಪದೆ ಪದೆ ಜರುಗುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕು. ಗೋಕಾಕ ಶೈಕ್ಷಣಿಕ ವಲಯ ವಿದ್ಯಾರ್ಥಿಗಳಿಗಾಗಿ ನಿರಂತರವಾಗಿ ಬೇರೆ ಬೇರೆ ಚಟುವಟಿಕೆಗಳು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣಾಧಿಕಾರಿ ಪ್ರಕಾಶ್ ಹಿರೇಮಠ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ, ಎಸ್.ವ್ಹಿ.ಕುಲಕರ್ಣಿ,ಎಂ.ಎಲ್.ಜನ್ಮಟ್ಟಿ, ಎಂ.ಬಿ.ಬಳಿಗಾರ, ಪ್ರಾಚಾರ್ಯ ಶ್ರೀಮತಿ ಸುಚಿತ್ರಾ ಹತಪಾಕಿ, ಎ.ಎನ್.ತೋಟಗಿ, ಬಸವರಾಜ ಮುರಗೋಡ, ಬಿ.ಟಿ.ಭಡವಣಿ, ಅಶ್ವಥ ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA