Breaking News

ಗೋಕಾಕ : ಮಗನ ಸಾಲಕ್ಕಾಗಿ ತಂದೆಯನ್ನು ಕೊಂದವರಿಗೆ ಶಿಕ್ಷೆ!


ಗೋಕಾಕ : ಮಗ ಮಾಡಿದ್ದ 700 ರೂ. ಸಾಲದ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಗೋಕಾಕಿನ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶಿಸಿದೆ.

ಮಾನಿಂಗ್ ಗಾಯಕವಾಡ(41) ಕೊಲೆಯಾಗಿದ್ದ ವ್ಯಕ್ತಿ. ಕಳೆದ ವರ್ಷ ಮಾರ್ಚ್‌ನಲ್ಲಿ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದಲ್ಲಿ ‌ನಡೆದಿದ್ದ ಹತ್ಯೆ ಪ್ರಕರಣ.ಮಾನಿಂಗ್ ಮಗ ಹಣಮಂತ ಗಾಯಕವಾಡ ತನ್ನ ಮನೆಯ ಪಕ್ಕದ ಆರೋಪಿ ಬಳಿ 700 ಸಾಲ ಮಾಡಿಕೊಂಡಿದ್ದ. ರಾಜು ಶಂಕರ್ ಭಜಂತ್ರಿ ಬಳಿ 700 ರೂ ಸಾಲ ಮಾಡಿದ್ದ ಹಣಮಂತ. ಇದೇ ವಿಚಾರವಾಗಿ ಶುರುವಾಗಿದ್ದ ಜಗಳ ಮಾನಿಂಗ ಕೊಲೆಯಲ್ಲಿ ಅಂತ್ಯವಾಗಿತ್ತು. 

ಕೊಲೆ ವಿಚಾರವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಕೊಲೆ ಪ್ರಕರಣದಲ್ಲಿ ರಾಜು ಶಂಕರ್ ಭಜಂತ್ರಿ, ಗೀತಾ ರಾಜು ಭಜಂತ್ರಿ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು. ನ್ಯಾಯಾಲಯ ವಿಚಾರಣೆ ವೇಳೆ ತಪ್ಪಿಸ್ಥರೆಂದು ಸಾಬೀತಾದ ಹಿನ್ನೆಲೆ ಐಪಿಸಿ ಸೆಕ್ಷನ್ 304 ರ ಪ್ರಕಾರ 9 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದ ನ್ಯಾಯಾಲಯ. ಈ ಪ್ರಕರಣದಲ್ಲಿ ಅಭಿಯೋಜಕ ಸುನೀಲ ಹಂಜಿ ಸರ್ಕಾರದ ಪರ ವಕಾಲತ್ತು ವಹಿಸಿದ್ದರು


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ. ಪ್ರಪಂಚಾದ್ಯಂತ ಪಸರಿಸಿರುವ ಕ್ರಿಕೆಟ್ ಆಟವು ಪ್ರತಿ ಹಳ್ಳಿ- ಹಳ್ಳಿಗೂ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ