ಗೋಕಾಕ: ನಗರದ ಉಪಕರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ನಡೆದಿದೆ.
ನೇಣಿಗೆ ಶರಣಾಗಿರುವ ವಿಚಾರಣಾಧೀನ ಮೃತ ಖೈದಿಯು ಅಥಣಿ ತಾಲೂಕಿನ ಐಗಳಿ ಗ್ರಾಮದ ನಿವಾಸಿ. ಕೊಲೆ ಮತ್ತು ಪೋಕ್ಸೋ ಪ್ರಕರಣದಲ್ಲಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಕಳೆದ ಬುಧವಾರದಂದು ಸಂಜೆ ಉಪಕಾರಾಗೃಹದ ಸೇಲ್ನ ಹೊರಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ಬೇಡಸೀಟನಿಂದ ನೇಣು ಬೀಗಿದುಕೊಂಡಿದ್ದಾನೆ.
ವಿಚಾರಣಾಧೀನ ಖೈದಿ ಮೋದಿನಅಲಿ ಗೊಟೆ ಮೂಲತಃ ಅಥಣಿ ತಾಲೂಕಿನ ತೆಲಸಂಗ ಗ್ರಾಮದವನಾಗಿದ್ದು, ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಮೃತ ವಿಚಾರಣಾಧೀನ ಖೈದಿಯನ್ನು ಕರೆತರಲಾಗಿದೆ.
ಈ ಕುರಿತು ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.