ಬೆಳಗಾವಿ: ಯುವ ನಾಯಕ, ಸತೀಶ್ ಶುಗರ್ಸ್ ನಿದೇರ್ಶಕರಾದ ರಾಹುಲ್ ಸತೀಶ್ ಜಾರಕಿಹೊಳಿ ಅವರ ಜನ್ಮದಿನ ಕಾರ್ಯಕ್ರಮವನ್ನು ಅ. 2,3,4 ರಂದು ಅದ್ದೂರಿಯಾಗಿ ಆಚರಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಮತ್ತು ಪ್ರಿಯಂಕಾ ಜಾರಕಿಹೊಳಿ ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಅ. 2ರಂದು ಬೆಳಗಾವಿ ನಗರದ ಕೆಪಿಟಿಸಿಎಲ್ ಹಾಲ್, ಅ. 3ರಂದು ಯಮಕನಮರಡಿ ಮತಕ್ಷೇತ್ರದ ಅಲದಾಳ ಗೆಸ್ಟ್ ಹೌಸ್, ಅ. 4ರಂದು ಗೋಕಾಕ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಜನ್ಮದಿನ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಈ ಮೂರು ದಿನಗಳ ಕಾಲ ನಡೆಯುವ ಜನ್ಮದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲಾ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ಯಶ್ವಸಿಗೊಳಿಸಬೇಕೆಂದು ಅಭಿಮಾನಿ ಬಳಗ ತಿಳಿಸಿದೆ.”
CKNEWSKANNADA / BRASTACHARDARSHAN CK NEWS KANNADA