ಗೋಕಾಕ : ಪ್ರತಿನಿತ್ಯ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿದ್ದು , ತಳ ಮಟ್ಟದಿಂದ ಜಾಗೃತಿ ಮೂಡಿಸಿ, ವಿಧ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಗೋಕಾಕ ಗ್ರಾಮೀಣ ಪಿಎಸ್ಐ ಎನ್ ಖಿಲಾರೆ ಅವರು ತಿಳಿಸಿದರು.
ತಾಲೂಕಿನ ಮರಡಿಮಠ ಗ್ರಾಮದ ಕಾಡಸಿದ್ದೇಶ್ವರ ಮಠದ ಕಾಲೇಜಿನಲ್ಲಿ ಸಿಪಿಐ ಗೋಪಾಲ ರಾಠೋಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ವಾಹನ ಚಾಲಕರು ಹಾಗೂ ದ್ವಿಚಕ್ರವಾಹನ ಸವಾರರು ಜೊತೆಗೆ ವಿದ್ಯಾರ್ಥಿಗಳು ಸಹಿತ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಶಾಲಾ ಕಾಲೇಜು,ಕಚೇರಿಗೆ ಸರಿಯಾದ ಸಮಯಕ್ಕೆ ಹೋಗಲು ತಡವಾದರೂ ಸಹ ಸಂಚಾರ ನಿಯಮ ಪಾಲಿಸಬೇಕು.ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ,ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು, ಇತರರಿಗೂ ಜಾಗೃತಿ ಮೂಡಿಸಬೇಕು.
ವಿದ್ಯಾರ್ಥಿಗಳು 18 ವರ್ಷ ದಾಟಿದರೆ ಮಾತ್ರ ದ್ವಿಚಕ್ರವಾಹನ ಓಡಿಸಬಹುದು,ಕಡ್ಡಾಯವಾಗಿ ವಾಹನ ಪರವನಾಗಿ, ವಿಮಾ, ಹೆಲ್ಮೇಟ್ ಬಳಸಬೇಕು ವಯಸ್ಸು 18 ರೊಳಗೆ ದ್ವಿಚಕ್ರ ವಾಹನ್ ಚಲಾಯಿಸಿದರೆ , ವಾಹನದಲ್ಲಿ ಮೂವರು ಕುಳಿತು ಚಲಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು .
ಕಾಲೇಜಿಗೆ ಬರುವಾಗ ಹೋಗುವಾಗ ಪುಟ್ಪಾತ್ ಬಳಸಿ ಬರಬೇಕು ರಸ್ತೆ ದಾಟುವಾಗ ತಿರುವಗಳಲ್ಲಿ, ವೃತ್ತಗಳಲ್ಲಿ ಅವಸರ ಮಾಡದೆ ವಾಹನ ಚಲಿಸಿದೆ ಮೇಲೆ ಹೋಗಬೇಕು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸಂದೇಶ ಮಾಡಿಕೊಂಡು ಬರುವಾಗ ಅಫಘಾತಗಳು ಹೆಚ್ಚು ಸಂಭವಿಸುತ್ತಿವೆ.ರಸ್ತೆ ನಿಯಮಗಳನ್ನು ಪಾಲಿಸಿದ್ದೆಯಾದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬರಗಾಲಿ, ಮೊರೇ, ತಳವಾರ,ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.