Breaking News

ಕನ್ನಡದಲ್ಲಿ ಪಥಸಂಚಲನ ಮಾಡಿದ ಪಿಎಸ್ಐ ಕೆ ವಾಲಿಕಾರ ಅವರಿಗೆ ಹರಿದು ಬಂತು ಅಭಿಮಾನ ಮಹಾಪುರ.


ಗೋಕಾಕ : ಗಣರಾಜ್ಯೋತ್ಸವ ಪೊಲೀಸ ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದಿರುವ ಗೋಕಾಕ ಶಹರ ಠಾಣೆ ಪಿಎಸ್ಐ ಕೆ.ವಾಲಿಕರ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಅಭಿನಂದನಾ ಪತ್ರ ಕಳುಹಿ‌ಸಿರುವ ಅವರು ಪೊಲೀಸ ಇಲಾಖೆಯಲ್ಲಿ ಕವಾಯತ್ತು ಪ್ರದರ್ಶನದಲ್ಲಿ ಕೆಲವ ಹಿಂದಿ ಮತ್ತು ಇಂಗ್ಲಿಷನಲ್ಲಿಯೆ ನಿರ್ದೇಶನ ನೀಡುತ್ತಿರುವ ಸಂದರ್ಭದಲ್ಲಿ 73ನೇ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಗೋಕಾಕ ಶಹರ ಪೋಲಿಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರು ಕನ್ನಡದಲ್ಲಿ ಆದೇಶ ನೀಡಿದ್ದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ, ಅಖಂಡ ಕನ್ನಡದ ಮನಸ್ಸುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿ, ಇದು ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಮಾದರಿಯಾಗಲಿ ಎಂದು ಪ್ರಾಧಿಕಾರ ಹಾರೈಸುತ್ತದೆ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಬಳಕೆ ಮತ್ತು ಅನುಷ್ಠಾನ ಆಡಳಿತ ವ್ಯವಸ್ಥೆಯಲ್ಲಿ ಕಟ್ಟು ನಿಟ್ಟಾಗಿ ಜಾರಿಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಅಭಿನಂದನಾ ಪತ್ರವನ್ನು ಪಿಎಸ್ಐ ಕೆ.ವಾಲಿಕರ ಅವರಿಗೆ ಕಳುಹಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ