Breaking News

ಸಂಘರ್ಷ ಪಾದಯಾತ್ರೆಗೆ ಸಾಥ್ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ


ಬೆಳಗಾವಿ : ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಕೈಗೊಂಡಿರುವ ಸಂಘರ್ಷ ಪಾದಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ಧಾರೆ.

ನಿನ್ನೆ ಸಂಜೆ ಖಾನಪುರದಿಂದ ಪಾದಯಾತ್ರೆಯನ್ನು  ಆರಂಭಿಸಿದ ನಿಂಬಾಳ್ಕರ್ ಅವರು 40 ಕಿ.ಮೀ ನಡೆದು ಸುವರ್ಣಸೌಧ ತಲುಪಲಿದ್ದಾರೆ.  ಚಳಿಗಾಲ ಅಧಿವೇಶ ಇಂದು ಆರಂಭವಾಗಲಿದ್ದು, ಪಾದಯಾತ್ರೆಯ ಮೂಲಕ ಸರ್ಕಾರ ಗಮನ ಸೆಳೆಯಲು ಶಾಸಕಿ ಮುಂದಾಗಿದ್ದಾರೆ. ಸುವರ್ಣ ಸೌಧದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಇಂದು ಬೆಳಗ್ಗೆ ಸುವರ್ಣ ಸೌಧದ ಬಳಿ ಪಾದಯಾತ್ರೆ ಮೂಲಕ ಶಾಸಕಿ ಆಗಮಿಸುತ್ತಿದಂತೆ ಅವರಿಗೆ , ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರು ಸಾಥ್ ನೀಡಿದರು.

ಈ ಮೊದಲು ಶಾಸಕಿ ಮಾತನಾಡಿ, ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈ ಹಿಂದೆ ಸರ್ಕಾರದ ಗಮನ ಸೆಳೆದಿದ್ದೆ. ಆದರೆ ಸರ್ಕಾರ ಸಮಸ್ಯೆಗೆ ಪರಿಹಾರ ನೀಡದ ಕಾರಣ ಕ್ಷೇತ್ರದ ಜನರ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂಧಿಸದಿದ್ದರೆ ಸದನದಲ್ಲೂ ಈ ಕುರಿತು ಧ್ವನಿ ಎತ್ತುತ್ತೇನೆ. ನಮ್ಮ ಸಮಸ್ಯೆ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ. ಪ್ರಪಂಚಾದ್ಯಂತ ಪಸರಿಸಿರುವ ಕ್ರಿಕೆಟ್ ಆಟವು ಪ್ರತಿ ಹಳ್ಳಿ- ಹಳ್ಳಿಗೂ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ