ಗೋಕಾಕ: ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಲಕ್ಷ್ಮಣ ತಪಸಿ ಅವರನ್ನು ನೇಮಕಗೊಳಿಸಿದ್ದಾರೆ.
ನಗರದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮಣ ತಪಸಿ ಅವರನ್ನ ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಅಧ್ಯಕ್ಷರಾದ ಡಾ॥ ಕೆ ಲಕ್ಷ್ಮಣ ಅವರು ಆದೇಶ ಹೊರಡಿಸಿದ್ದಾರೆ.
ತಮ್ಮನ್ನು ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೆಂದು ನೇಮಕಾತಿ ಆಗಿರುವುದಕ್ಕೆ ಹಾರ್ದಿಕ ಅಭಿನಂದನೆಗಳು. ತಾವು ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಲು ಈ ತಕ್ಷಣ ತಮಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಮತ್ತು ನಾವೆಲ್ಲರೂ ಸೇರಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಹಾಗೂ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರ ನೇತೃತ್ವದಲ್ಲಿ ಪಕ್ಷದ ಅಭಿವೃದ್ಧಿ ಹಾಗೂ ರಾಷ್ಟ್ರದ ಸೇವೆಗಾಗಿ ಶ್ರಮಿಸೋಣ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಡಾ॥ಕೆ ಲಕ್ಷ್ಮಣ ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.