ಗೋಕಾಕ: ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರ ವತಿಯಿಂದ ಮಾನ್ಯ ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಕೋರಿಕೆಯ ಮೇರೆಗೆ ಗೋಕಾಕ ಮತಕ್ಷೇತ್ರಕ್ಕೆ 2500 ಆಹಾರ ಸಾಮಗ್ರಿಗಳ ಕೀಟ್ ಕಟ್ಟದ ಮತ್ತು ಇತರೆ ನಿರ್ಮಾಣ ನೊಂದಾಯಿತ ಕಾರ್ಮಿಕರಿಗೆ ನಗರದ ಶಾಸಕರ ಕಛೇರಿಯಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಡೆಪ್ಪಾ ತೋಳಿನವರ, ಟಿ ಆರ್ ಕಾಗಲ, ಕಾರ್ಮಿಕ ನಿರಿಕ್ಷಕರಾದ ಪಿ ವ್ಹಿ ಮಾವರಕರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರ ಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ಉಪಾಧ್ಯಕ್ಷ ಬಸವರಾಜ ಆರೆನ್ನವರ. ಹಾಗೂ ಅನೇಕ ಉಪಸ್ಥಿತರಿದ್ದರು.