ಕರ್ನಾಟಕ ರಾಜ್ಯದ ಪ್ರಖ್ಯಾತ ಮುಖ್ಯ ಅಭಿಯಂತರರಾದ (ನಿವೃತ್ತ) *ಕ್ಯಾಪ್ಟನ್ ರಾಜಾರಾವ್* ಅವರಿಗೆ ಈ ಬಾರಿಯ ಪ್ರತಿಷ್ಠಿತ *ರಾಜ್ಯೋತ್ಸವ* ಪ್ರಶಸ್ತಿಯನ್ನು ನೀಡುವಂತೆ ಜಲಸಂಪನ್ಮೂಲ ಇಂಜಿನಿಯರ್ ಗಳ ಸಂಘ, ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರಿಗೆ ಮನವಿ ಮಾಡಿದೆ.
ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿ ಮಾಡಿದ ಅಭಿಯಂತರರು, ಈ ಬಾರಿ *ರಾಜ್ಯೋತ್ಸವ ಪ್ರಶಸ್ತಿಗೆ ತಾಂತ್ರಿಕ ಕ್ಷೇತ್ರ* ವನ್ನೂ ಪರಿಗಣಿಸುವಂತೆ ಒತ್ತಾಯಿಸಿದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅಭಿಯಂತರರು ಸದಾ ಶ್ರಮಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. 6 ದಶಕಗಳ ಕಾಲ ರಾಜಾರಾವ್ ಅವರು ಸಲ್ಲಿಸಿರುವ ಸೇವೆ ನಮಗೆಲ್ಲ ಮಾದರಿ. ಹಾಗಾಗಿ ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಈ ಕುರಿತು ಮಾತನಾಡಿ, *ತಾಂತ್ರಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಮನಿಸಿ ಕ್ಯಾಪ್ಟನ್ ಎಸ್. ರಾಜಾರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡುತ್ತೇನೆ* ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದರು.