Breaking News

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್‌ಗೆ ಬ್ರೇಕ್!


ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, ಫೋಟೋಶೂಟ್, ಪ್ರಿ-ವೆಡ್ಡಿಂಗ್ ಶೂಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್‌ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್‌ ಕುಮಾರ್‌ ದಾನಪ್ಪ ಪೊಲೀಸ್‌ ಮಹಾ ನಿರ್ದೇಶಕರಿಗೆ ಮತ್ತು ಮಹಾ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸುಧೀರ್ಘ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ಅಧಿಕಾರಿ ಮತ್ತು ಸಿಬ್ಬಂದಿಯ ವೇಷಭೂಷಣ, ಸಮಯಪಾಲನೆ, ಸಾರ್ವಜನಿಕರೊಂದಿಗೆ ವರ್ತನೆ ಹಾಗೂ ಕರ್ತವ್ಯನಿರ್ವಹಣೆಯಲ್ಲಿ ಪ್ರತಿಫಲಿಸುತ್ತದೆ, ಶಿಸ್ತಿನಿಂದ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯು ಸಾರ್ವಜನಿಕರಲ್ಲಿ ವಿಶ್ವಾಸ ಮೂಢಿಸಿ ಸಾರ್ವಜನಿಕ ಸುರಕ್ಷತೆ ಕಾಪಾಡುವಲ್ಲಿ ಶಿಸ್ತು ವರ್ತನೆ ಪ್ರಮುಖ ಪಾತ್ರವಹಿಸುವುದಲ್ಲದೆ ಯಶಸ್ಸಿನ ಮೂಲವಾಗಿದೆ, ಪೊಲೀಸ್ ಇಲಾಖೆಯು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದೆ.

 

ಈ ಇಲಾಖೆಯ ಘನತೆ ಗೌರವ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುವ ಪ್ರಮುಖ ಅಂಶಗಳಲ್ಲಿ ಸಮವಸ್ತ್ರವು ಒಂದು, ಪೊಲೀಸ್ ಸಮವಸ್ತ್ರವು ಕೇವಲ ಉಡುಪು ಮಾತ್ರವಲ್ಲ ಅದು ಕರ್ತವ್ಯ ನಿಷ್ಠೆ, ಶಿಸ್ತು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದ ಸಂಕೇತವಾಗಿದೆ, ಸಾರ್ವಜನಿಕ ನಂಬಿಕೆಯ ಸಂಕೇತವಾಗಿದೆ, ಪೊಲೀಸ್ ಇಲಾಖೆಯಲ್ಲಿ ಸಮವಸ್ತ್ರ ಶಿಸ್ತಿಗೆ ವಿಶೇಷ ಮಹತ್ವವಿದೆ, ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಯು ಇಲಾಖೆಯಿಂದ ನಿಗದಿಪಡಿಸಲಾದ ಸಮವಸ್ತ್ರವನ್ನು ಸ್ವಚ್ಚವಾಗಿ, ಅಚ್ಚುಕಟ್ಟಾಗಿ ಮತ್ತು ನಿಯಮಾನುಸಾರ ಧರಿಸಬೇಕು, ಸಮವಸ್ತ್ರ ಶಿಸ್ತು ಸಿಬ್ಬಂದಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಪೊಲಿಸ್ ಇಲಾಖೆಯ ಬಗ್ಗೆ ಗೌರವ ಮತ್ತು ನಂಬಿಕೆಯನ್ನು ಮೂಢಿಸುತ್ತದೆ.ಕರ್ತವ್ಯದ ವೇಳೆಯಲ್ಲಿ ಅಚ್ಚುಕಟ್ಟಾದ ಸಮವಸ್ತ್ರ ಧರಿಸಿರುವ ಸಿಬ್ಬಂದಿ ಇಲಾಖೆಯ ಉತ್ತಮ ಪ್ರತಿನಿಧಿಗಳಾಗಿರುತ್ತಾರೆ. 

 

ಇದು ಇಲಾಖೆಯ ಘನತೆಯನ್ನು ಹೆಚ್ಚಿಸುವುದಲ್ಲದೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಸಹಕಾರಿಯಾಗಿದ್ದು ಈ ಎಲ್ಲಾ ಗುಣಗಳು ಒಬ್ಬ ಉತ್ತಮ ಪೊಲೀಸ್ ಸಿಬ್ಬಂದಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆಧುನಿಕ ಯುಗದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬದಲಾಗುತ್ತಿದ್ದರೂ, ಸಮವಸ್ತ್ರ ಶಿಸ್ತಿನ ಮಹತ್ವ ಮಾತ್ರ ಕಡಿಮೆಯಾಗಿರುವುದಿಲ್ಲಾ ಇಂತಹ ಶಿಸ್ತನ್ನು ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಘನತೆ ಗೌರವವನ್ನು ಕಾಪಾಡಿಕೊಂಡು ಬಂದಿರುತ್ತಾರೆ.ಆದರೆ ಇತ್ತಿಚಿಗೆ ಇಲಾಖೆಯ ಕೆಲವು ಅಧಿಕಾರಿ ಸಿಬ್ಬಂದಿಗಳು ಸಮವಸ್ತ್ರದಲ್ಲಿ ದಿನ ನಿತ್ಯ ರೀಲ್ಸ್ ಮಾಡುವುದು, ಸಮವಸ್ತ್ರದಲ್ಲಿ ವಿವಾಹ ಪೂರ್ವ ಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತಿರುವುದು (ಪ್ರಿವೆಡ್ಡಿಂಗ್ ಶೂಟ್) ಸಮವಸ್ತ್ರದಲ್ಲಿ ಹಾಡು, ನೃತ್ಯ, ನಟನೆ, ಸಾಹಸ, ಕಥೆ, ಕವನ, ಬ್ಲಾಗ್, ಸಂದೇಶ, ನೀತಿ ಪಾಠ, ವಿಚಾರ, ಉಪನ್ಯಾಸ, ಇಲಾಖೆಯ ಸರ್ಕಾರಿ ವಾಹನ, ಆಯುಧಗಳ ಪ್ರದರ್ಶನ ಮಾಡುವಂತಹ ರೀಲ್ಸ್‌ಗಳು, ಫೋಟೊಗಳು, ವಿಡಿಯೋಗಳನ್ನು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ಗಳನ್ನು ಮಾಡುತ್ತಿದ್ದು ಇನ್ನು ಕೆಲವು ಹಿರಿಯ (ಜಿಲ್ಲಾ ಮಟ್ಟ ಮತ್ತು ಅದಕ್ಕಿಂತ ಉನ್ನತ ದರ್ಜೆ) ಅಧಿಕಾರಿಗಳು ಸರ್ಕಾರಿ ವಾಹನದಿಂದ ಇಳಿಯುತ್ತಿರುವಂತೆ ಸಾರ್ವಜನಿಕರ ಜೊತೆ ಬೆರೆತಂತೆ, ಬಂದೋಬಸ್ತ್ ಡ್ಯೂಟಿ, ಜಾತ್ರೆ ಮಹೋತ್ಸವ, ಸರ್ಕಾರಿ ಕರ್ತವ್ಯದ ನಿರ್ವಹಣೆ, ಮೇಲ್ವಿಚಾರಣೆ, ವಾರದ ಕವಾಯತ್ತು, ಬಂದೂಕು ತರಬೇತಿ, ಪರಿಶೀಲನೆ, ಸೇರಿದಂತೆ ದಾಖಲಾಗುವ ಘಟನೆ ಪ್ರಕರಣಗಳ ಸ್ಥಳ ವೀಕ್ಷಣೆಯಂತಹ ಕರ್ತವ್ಯಗಳನ್ನು ನಿರ್ವಹಿಸುವಾಗ ನಾನಾ ರೀತಿ ಭಂಗಿಯಲ್ಲಿ ವಿಡಿಯೋ, ಪೋಟೋಗಳನ್ನು ಸೆರೆಹಿಡಿಯುವುದು ಮತ್ತು ಸೆರೆಯಿಡಿಲಿಕ್ಕಾಗಿಯೇ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಇತರೆ ವ್ಯಕ್ತಿಗಳನ್ನು ನೇಮಿಸಿಕೊಂಡು ವಿಡೀಯೋ ಚಿತ್ರಿಕರಿಸಿ ಬಿಜಿಎಂ ಸೌಂಡ್ಸ್ ಗಳನ್ನು(ಹಿನ್ನಲೆ ಧ್ವನಿ) ಸೇರಿಸಿ ತಮಗೆ ಬೇಕಾದಂತೆ ಎಡಿಟ್ ಮಾಡಿಸಿ ತಮ್ಮ ವೈಯಕ್ತಿಕ ಖಾತೆಯಲ್ಲದೆ ತಮ್ಮ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ಗಳನ್ನು ಸಹ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸಿ ಚಿತ್ರ ನಟರಂತೆ, ಜನಪ್ರತಿನಿಧಿಗಳಂತೆ ಸಮಾಜದಲ್ಲಿ ವೈಭವಿಸಿಕೊಳ್ಳುತ್ತಿದ್ದು ಇನ್ನೂ ಕೆಲವು ಹಿರಿಯ ಅಧಿಕಾರಿಗಳು ತಾವು ಇನ್ನಷ್ಟು ಖ್ಯಾತಿ ಪಡೆಯಲು ರಾಜ್ಯದಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರುವ ಯೂಟೂಬರ್ಸ್ ಸೋಶಿಯಲ್ ಮೀಡಿಯಾ ಸ್ಟಾರ್ಸ್, ಪ್ರಮೋಷನರ್‌ಗಳನ್ನು ತಮ್ಮ ಕಛೇರಿಗಳಿಗೆ ಆಹ್ವಾನಿಸಿ ಅವರುಗಳಿಗೆ ಗೌರವಿಸುವ ನೆಪದಲ್ಲಿ ಪ್ರಚಾರ ಪಡಿಸಿಕೊಳ್ಳುತ್ತಿರುವ ಘಟನೆಗಳು ಮತ್ತು ಆರೋಪಗಳು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುತ್ತವೆ.

 

ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗೆ ನೇಮಕವಾಗುವ ಅಧಿಕಾರಿ ಸಿಬ್ಬಂದಿಗಳು ತರಬೇತಿ ಅವಧಿಯಲ್ಲಿ ಸಮವಸ್ತ್ರದಲ್ಲಿ ಸೆರೆಯಿಡಿಯುವ ವಿಡಿಯೋ, ರೀಲ್ಸ್, ಪೋಟೋಗಳನ್ನು ಮತ್ತು ಆಯುಧಗಳ ಪ್ರದರ್ಶನದಂತಹ ಚಿತ್ರಗಳನ್ನು ಸಾಮಾಜಿಕ ಖಾತೆಗಳಲ್ಲಿ ಹರಡದಂತೆ ರಾಜ್ಯದ ಎಲ್ಲಾ ಪೊಲೀಸ್ ಅಕಾಡೆಮಿ ಮತ್ತು ಪೊಲೀಸ್ ತರಬೇತಿ ಕೇಂದ್ರಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡುವುದು ಹಾಗೂ ಬೋದಕರು ತರಬೇತಿಯಲ್ಲಿರುವ ಅಧಿಕಾರಿ ಸಿಬ್ಬಂದಿಗಳಿಗೆ ನಿರಂತರ ಎಚ್ಚರಿಕೆ ನೀಡಬೇಕು. ಅಲ್ಲದೇ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ ಹಾಗೂ ಪೊಲೀಸ್ ಸಮವಸ್ತ್ರದ ಘನತೆ ಕಾಪಾಡುವ ಕುರಿತು ಎಲ್ಲಾ ಸಿಬ್ಬಂದಿಗೆ ಜಾಗೃತಿ ಮೂಡಿಸುವುದು ಮತ್ತು ಎಲ್ಲಾ ಮೇಲ್ವಿಚಾರಣಾಧಿಕಾರಿಗಳು ತಮ್ಮ ಅಧೀನದ ಅಧಿಕಾರಿ ಸಿಬ್ಬಂದಿಗಳ ಅಂತಹ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ನಿಯಮ ಉಲ್ಲಂಘಿಸುವ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಇಲಾಖೆ ವಿಚಾರಣೆಯೊಂದಿಗೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು.

 

ಈ ಕುರಿತು ರಾಜ್ಯದ ಎಲ್ಲಾ ಘಟಕದ ಮುಖ್ಯಸ್ಥರು, ಪೊಲೀಸ್ ಆಯುಕ್ತರುಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಸದರಿ ಆದೇಶ/ನಿರ್ದೇಶನವನ್ನು ಇಲಾಖೆಯ ಎಲ್ಲಾ ದರ್ಜೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ವಯ ಎನ್ನುವದನ್ನು ಸ್ಪಷ್ಟವಾಗಿ ಎಚ್ಚರಿಕೆ ನೀಡಬೇಕು. ಈ ವಿಷಯ ಮತ್ತು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ದರ್ಜೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಮಾಜಿಕ ಜಾಲತಾಣ (ಫೇಸ್‌ಬುಕ್, ಇನ್ಸಾಗ್ರಾಮ್, ಯೂಟ್ಯೂಬ್ ಸೇರಿದಂತೆ ಇತರೆ ಎಲ್ಲಾ) ದಲ್ಲಿನ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಪೊಲೀಸ್ ವೃತ್ತಿ, ಕರ್ತವ್ಯಗಳಿಗೆ ಸಂಬಂಧಿಸಿದ ಮತ್ತು ಸಂಬಂಧಿಸದ ವಿಷಯಗಳ ಕುರಿತು ಪೊಲೀಸ್ ಸಮವಸ್ತ್ರದಲ್ಲಿನ ಯಾವುದೇ ಪೋಟೋ, ರೀಲ್ಸ್, ವಿಡಿಯೋ, ಬ್ಲಾಗ್‌ಗಳನ್ನು ಕಡ್ಡಾಯವಾಗಿ ಹಾಕದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಹಾಗೂ ಆದೇಶ ಹೊರಡಿಸುವಲ್ಲಿ ಈ ಮೇಲ್ಕಂಡ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಮತ್ತು ಈ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಕಛೇರಿಗೆ ಮಾಹಿತಿ ನೀಡುವಂತೆ ತಮ್ಮಲ್ಲಿ ಕೋರಿದೆ ಎಂದು ತಿಳಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಹುಣಶ್ಯಾಳ ಪಿವೈ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪ್ರವಚನದ ಸಮಾರೋಪದ ಸಮಾವೇಶ

*ಗಂಗಾಮತಸ್ಥ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಧನಸಹಾಯ: ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ*- ಹಿಂದುಳಿದ ಗಂಗಾಮತಸ್ಥ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ