ಶಾಸಕ ರಮೇಶ ಜಾರಕಿಹೊಳಿಯವರ ಕಾರ್ಯಕ್ಕೆ ಜನರ ಮೆಚ್ಚುಗೆ!

ಘಟಪ್ರಭಾ: ರಮೇಶ ಜಾರಕಿಹೊಳಿಯವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಘಟಪ್ರಭಾದಲ್ಲಿ ರಸ್ತೆ ಅಗಲಿಕರಣಕ್ಕೆ ತೊಂದರೆಯಾಗುತ್ತಿರುವ ಹಾಗೂ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ಸೋಮವಾರದಂದು ಘಟಪ್ರಭಾ ಪುರಸಭೆ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಘಟಪ್ರಭಾ ಠಾಣೆಯ ಪೊಲೀಸ್‌ರ ಬಿಗಿ ಭದ್ರತೆಯ ಸಮ್ಮುಖದಲ್ಲಿ ತೆರವು ಕಾರ್ಯಕ್ಕೆ ಚಾಲನೆ ನೀಡಿದರು.
ರಸ್ತೆ ಅಗಲಿಕರಣಕ್ಕೆ ಶಾಸಕ ರಮೇಶ ಜಾರಕಿಹೊಳಿಯವರು 8 ತಿಂಗಳ ಹಿಂದೆ ಪೂಜೆ ಸಲ್ಲಿಸಿದರು ಆದರೆ ರಸ್ತೆ ಬದಿಯಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಕಾರಣ ಕಾಮಗಾರಿ ವಿಳಂಬವಾಗಿತ್ತು, ದಿನೇ-ದಿನೇ ರಸ್ತೆ ಸಂಪೂರ್ಣ ಶಿಥಿಲಗೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಗುತ್ತಿದ್ದು ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತಿತ್ತು. ಕಳೆದ ಕೆಲವು ತಿಂಗಳಿನಿಂದ ಸರ್ವೆ ನಡೆಸಿ ತೆರವು ಕಾರ್ಯ ಮಾಡಲಾಗುತ್ತದೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದರು ಸಹ ತೆರವು ಮಾಡಿಸಿರಲಿಲ್ಲ ಆದರೆ ಕಳೆದ ನಾಲ್ಕು ದಿನಗಳಿಂದ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ವೆ ಇಲಾಖೆಯ ಅಧಿಕಾರಿಗಳು ಜಿಪಿಎಸ್ ಮುಖಾಂತರ ರಸ್ತೆ ಅತಿಕ್ರಮಣದ ಗುರುತು ಪತ್ತೆ ಮಾಡಿ ಮಾರ್ಕಿಂಗ್ ಮಾಡಿದ್ದರು, ಇಂದು ಬೆಳಿಗ್ಗೆಯಿಂದ ತೆರವು ಕಾರ್ಯ ಪ್ರಾರಂಭಿಸಿದ್ದು ಹೆಚ್ಚಿನವರು ಸ್ವಚ್ಚೆಯಿಂದ ತೆರವು ಮಾಡಿದರು. ಅತಿಕ್ರಮಣ ಮಾಡಿ ಅಂಗಡಿ ಕಟ್ಟಿ ಕೊಂಡವರಿಗೆ ತೆರವುಗೊಳಿಸಲು ಸೂಚನೆ ನೀಡಿ ಕಾಲ ಅವಕಾಶ ನೀಡಿದ್ದರು.
ತೆರವು ಕಾರ್ಯಚರಣೆ ಮಾಡುವ ಸಲುವಾಗಿ ಪೊಲೀಸ್‌ರ ಭದ್ರತೆಯೊಂದಿಗೆ ಜೆಸಿಬಿ ಯಂತ್ರ ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಿಡಬ್ಲ್ಯೂಡಿ ಅಧಿಕಾರಿಗಳು ಅಗಮಿಸಿದ ಕೂಡಲೆ ಸ್ವಇಚ್ಚೆಯಿಂದಲೆ ಎಲ್ಲಾ ಅಂಗಡಿಕಾರರು ತಾವು ಮುಂದೆ ಹಾಕಿ ಕೊಂಡಿರುವ ಶೆಡ್ ಮತ್ತು ಬೋರ್ಡ್‌ಗಳನ್ನು ತೆಗೆದುಕೊಂಡು ತೆರವು ಕಾರ್ಯಚರಣೆಗೆ ಸಂಪೂರ್ಣ ಸಹಕಾರವನ್ನು ನೀಡಿದ್ದು ಯಾರೊಬ್ಬರು ತಕರಾರು ತೆಗೆಯದೆ ಬೆಂಬಲ ನೀಡಿರುವುದಕ್ಕೆ ಅವರಿಗೆ ಧನ್ಯವಾದವನ್ನು ಹೇಳುತ್ತೇನೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್.ಪಾಟೀಲ ಹೇಳಿದರು.
ರಸ್ತೆ ಅಗಲಿಕಾರಣಕ್ಕೆ ತೆರವು ಕಾರ್ಯ ನಡೆಯುತ್ತಿದೆ ಸುದ್ದಿ ತಿಳಿದ ತಕ್ಷಣ ಸಾರ್ವಜನಿಕರು, ಅಂಗಡಿಕರರು ತುಂಬಾ ಅಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಘಟಪ್ರಭಾ ಸರ್ಕಲ್‌ನಲ್ಲಿ ಸೇರಿದ್ದರಿಂದ ಜನರನ್ನು ನಿಯಂತ್ರಣ ಮಾಡುವುದೆ ಪೊಲೀಸರಿಗೆ ಸಹಾಸವಾಗಿತ್ತು.
ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲವೆಂದು ಹೇಳುತ್ತಾ ಬಂದಿರುವ ಶಾಸಕ ರಮೇಶ ಜಾರಕಿಹೊಳಿಯವರು ತೆರವು ಕಾರ್ಯಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ರಸ್ತೆ ಅಗಲಿಕರಣ ಮಾಡುತ್ತಿರುವುದಕ್ಕೆ ಘಟಪ್ರಭಾದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಅದೇ ರೀತಿ ಶಾಸಕ ರಮೇಶ ಜಾರಕಿಹೋಳಿಯವರನ್ನು ಭೇಟಿ ಮಾಡಿದ ಸಾರ್ವಜನಿಕರಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಘಟಪ್ರಭಾವನ್ನು ಸುಂದರ ಹಾಗೂ ಸ್ವಚ್ಚ ನಗರವನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲೆ ಇದೇ ಎಂದು ಹೇಳಿದ್ದಾರೆ.
ಮಂಗಳವಾರ ಕೂಡ ತೆರವು ಕಾರ್ಯಾಚರಣೆ ಮುಂದೆ ವರೆದಿದೆ.
CKNEWSKANNADA / BRASTACHARDARSHAN CK NEWS KANNADA