ಮೇ. 18 ರಿಂದ 28 ರತನಕ ಚಿಕ್ಕೋಡಿ ಉಪ ಕಾಲುವೆಗೆ ಒಟ್ಟು 0.475 ಟಿಎಂಸಿ ನೀರು.
ಮೇ. 22 ರಿಂದ 10 ದಿನಗಳವರೆಗೆ ಒಟ್ಟು 2.289 ಟಿಎಂಸಿ ನೀರು ಘಟಪ್ರಭಾ ಎಡದಂಡೆ ಕಾಲವೆಗೆ ನೀರು ಹರಿವು.
ಸಚಿವ ಸತೀಶ್ ಜಾರಕಿಹೊಳಿಯವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ.
ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಬರುವ ದಿ. 22 ಮತ್ತು ಚಿಕ್ಕೋಡಿ ಉಪ ಕಾಲುವೆಗೆ ಬರುವ ದಿ. 18 ರಿಂದ ನೀರು ಹರಿಸಲು ಕ್ರಮ ಕೈಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ತೀವ್ರ ಬರ ಮತ್ತು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ನೀರಿಲ್ಲದೇ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಡ್ಕಲ್ ಜಲಾಶಯದಿಂದ ಚಿಕ್ಕೋಡಿ ಉಪ- ಕಾಲುವೆಗೆ ಬರುವ ಸೋಮವಾರ ದಿ. 18 ರಿಂದ ಮುಂದಿನ ಹತ್ತು ದಿನಗಳವರೆಗೆ ದಿನಾಲು 550 ಕ್ಯೂಸೆಕ್ಸ್ ನಂತೆ 0.475 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ. ಅದರಂತೆ , ಘಟಪ್ರಭಾ ಎಡದಂಡೆ ಕಾಲುವೆಗೆ 2650 ಕ್ಯೂಸೆಕ್ಸ್ ರಂತೆ (ಜಿಎಲ್ಬಿಸಿ 2400 ಕ್ಯೂಸೆಕ್ಸ್, ಕನ್ವೆನ್ಸ್ ಲಾಸ್ 100 ಕ್ಯೂಸೆಕ್ಸ್) ಕೋಟಬಾಗಿ ಏತ ನೀರಾವರಿ ಯೋಜನೆಗೆ ಸೇರಿಸಿ ಒಟ್ಟು 2.289 ಟಿಎಂಸಿ ನೀರನ್ನು ಬರುವ ದಿನಾಂಕ 22 ರಿಂದ 10 ದಿನಗಳವರೆಗೆ ಒಟ್ಟು 2.764 ಟಿಎಂಸಿ ನೀರು ಬಿಡುಗಡೆ ಮಾಡಲು ಸಚಿವರು ಆದೇಶ ನೀಡಿದ್ದಾರೆ.
ಜನ ಮತ್ತು ಜಾನುವಾರುಗಳಿಗೆ ನೀರನ್ನು ಹರಿಸುವಂತೆ ನಾನು ಸತೀಶ್ ಜಾರಕಿಹೊಳಿಯವರಿಗೆ ಕೋರಿಕೆಯನ್ನು ಮಂಡಿಸಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ನೀರನ್ನು ಹರಿಸಲು ಸ್ವಲ್ಪ ವಿಳಂಬವಾಗಬಹುದು. ಆದ್ದರಿಂದ ಘಟಪ್ರಭಾ ಬಲದಂಡೆ ಕಾಲುವೆ ( GRBC ) ಯ ಸಾರ್ವಜನಿಕರು ಸಹಕರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮನವಿ ಮಾಡಿಕೊಂಡಿದ್ದಾರೆ.
ಹಿಡ್ಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರು ಕೇವಲ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
CKNEWSKANNADA / BRASTACHARDARSHAN CK NEWS KANNADA