Breaking News

Monthly Archives: ಅಕ್ಟೋಬರ್ 2021

ಒಂದೇ ಕುಟುಂಬದ ಐವರ ದಾರುಣ ಸಾವು: ತೀವ್ರ ಶೋಕ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಜಿ ಯೋಧನೊಬ್ಬ ತನ್ನ ನಾಲ್ವರು ಮಕ್ಕಳಿಗೆ ವಿಷ ನೀಡಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ಇವರು ನಾಲ್ಕು ಮಕ್ಕಳಿಗೆ ವಿಷ ಪ್ರಾಶನ ಮಾಡಿ ತಾನೂ ದಾರುಣವಾಗಿ ಸಾವಿಗೀಡಾಗಿರುವುದು ಅತ್ಯಂತ ದುಃಖಕರ ಸಂಗತಿ. ಇಂತಹ ದುಡುಕಿನ ನಿರ್ಧಾರವನ್ನು ಅವರು ಕೈಗೊಳ್ಳಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. …

Read More »

ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು:ಪವನ ಮಹಾಲಿಂಗಪುರ

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದಂದು ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ, ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷ ಪವನ ಹು ಮಹಾಲಿಂಗಪುರ ಅವರು ಆಗ್ರಹಿಸಿದ್ದಾರೆ. ಎಲ್ಲ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದೆ. ಚುನಾವಣೆಗಳನ್ನೂ ನಡೆಸಲಾಗುತ್ತಿದೆ. ಆದರೆ, ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸರಕಾರ ಹೇಳುತ್ತಿರುವುದು ಸಮಂಜಸವಲ್ಲ.ಗಡಿನಾಡಿನಲ್ಲಿ ಕನ್ನಡಿಗರ ಸ್ವಾಭಿಮಾನದ ಹಬ್ಬವನ್ನು ವಿಜೃಂಭಣೆಯಿಂದ ನಡೆಸಲು ಅನುವು ಮಾಡಿಕೊಡಬೇಕು. ಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಬೃಹತ್ …

Read More »

ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದ ಯುವ ನಾಯಕ ರಾಹುಲ್ ಜಾರಕಿಹೊಳಿ;ತಂದೆ ಸತೀಶ ಜಾರಕಿಹೊಳಿಯವರಿಗೆ ಸಾಥ್

ಹಾನಗಲ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಇಂದಿನಿಂದ ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹಾನಗಲ್ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತಂದೆ ಸತೀಶ ಜಾರಕಿಹೊಳಿಯವರಿಗೆ ಪುತ್ರ ರಾಹುಲ್ ನೆರವಾಗುತ್ತಿದ್ದಾರೆ. ತಂದೆಯೊಂದಿಗೆ ಎಲ್ಲೆಡೆಯೂ ಪ್ರಚಾರದಲ್ಲಿ ತೊಡಗಿದ್ದಾರೆ. ಯುವ ಮತಗಳನ್ನು ಸೆಳೆಯುತ್ತಿರುವ ರಾಹುಲ್: ರಾಹುಲ್ ಅವರು ಇಂದು ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ, ಅಕ್ಕಿಆಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಕ್ಕಿವಳ್ಳಿ ಗ್ರಾಮ …

Read More »

ಹಾನಗಲ್ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಭರ್ಜರಿ ಪ್ರಚಾರ!

ಹಾನಗಲ್: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಯವರು ರಾಮಜಪವನ್ನು ಬಿಟ್ಟು, ಜನರಿಗೆ ಹಣ ಹಂಚಲು ಶುರು ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಬಿಜೆಪಿಯವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ, ಹಣ ಹಂಚುವ ಮೂಲಕ ಮತ ಪಡೆಯುವ ಸಂಚು ನಡೆಸಿದ್ದಾರೆ. …

Read More »

ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ಮಹರ್ಷಿ ವಾಲ್ಮೀಕಿ : ರಾಹುಲ್ ಜಾರಕಿಹೊಳಿ

ಮೂಡಲಗಿ:”  ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಗ್ರಂಥವು ಜೀವನ ಸಂಘರ್ಷ ಹಾಗೂ ಮಾನವೀಯ ಮೌಲ್ಯಗಳ ಕನ್ನಡಿಯಾಗಿದೆ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ತಾಲ್ಲೂಕಿನ ವಡೆರಹಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿಯವರು ಈ ಗ್ರಂಥದ ಮೂಲಕ ಜಗತ್ತಿಗೆ ಅತ್ಯುತ್ತಮ ಮೌಲ್ಯಗಳ ಸಂದೇಶವನ್ನು ನೀಡಿದ್ದಾರೆ.  ಮಕ್ಕಳಿಗೆ ಬಾಲ ರಾಮಾಯಣ ಹಾಗೂ ಬಾಲ ಮಹಾಭಾರತ ಗ್ರಂಥಗಳನ್ನು ಪರಿಚಯಿಸುವುದರ ಮೂಲಕ …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗಳಿಗೆ ಹಾನಿ; ಸತೀಶ ಜಾರಕಿಹೊಳಿಯವರಿಂದ ಕುಟುಂಬಸ್ಥರಿಗೆ ಸಾಂತ್ವನ

ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಮನೆಗಳಿಗೆ ಹಾನಿಯಾಗಿತ್ತು. ವಿಷಯ ತಿಳಿದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಗ್ರಾಮಕ್ಕೆ ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾರ್ಟ್ ಸರ್ಕ್ಯೂಟ್ ನಿಂದ ಗ್ರಾಮದ ಕಲ್ಲಪ್ಪ ಮಡಿವಾಳರ ಹಾಗೂ ಸುರೇಶ ಮಡಿವಾಳರ ಎಂಬುವರ ಮನೆಗೆ ಹಾನಿಯಾಗಿತ್ತು. ಮನೆಯಲ್ಲಿನ ವಸ್ತುಗಳು ಕೂಡ ಹಾನಿಗೀಡಾಗಿದ್ದವು. ಎರಡೂ ಮನೆಗಳು ಅಕ್ಕಪಕ್ಕದಲ್ಲೇ ಇದ್ದು, ಈ …

Read More »

ವಾಲ್ಮೀಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ನಗರದ ವಾಲ್ಮೀಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳೊಂದಿಗೆ ಕೆಲಕಾಲ ಸತೀಶ ಅವರು ಚರ್ಚೆ ನಡೆಸಿದರು. “ಮಳೆ, ಚರಂಡಿಯಿಂದ ಕ್ರೀಡಾಂಗಣ ಜೌಗು ಹಿಡಿಯುತ್ತಿದೆ. ಇದಕ್ಕೆ ಏನಾದರು ವ್ಯವಸ್ಥೆ ಮಾಡಿ. ಕ್ರೀಡಾಂಗಣದಲ್ಲಿ ಹೈಮಾಸ್ಟ್ ಲೈಟ್ ಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ” ಎಂದು ಕ್ರೀಡಾಪಟುಗಳು ಸತೀಶ ಜಾರಕಿಹೊಳಿಯವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸತೀಶ ಅವರು, ಈ …

Read More »

ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮನದ ಮಾತು ಎಂಬ ಪುಸ್ತಕ ಬಿಡುಗಡೆ!

ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮನದ ಮಾತು ಎಂಬ ಪುಸ್ತಕ ಬಿಡುಗಡೆ ಮಾಡಿದರು. ರಾ.ಹ.ಕೊಂಡಕೇರ ಅವರ ಸಾಹಿತ್ಯದಲ್ಲಿ ಮೂಡಿಬಂದಂತಹ ಮನದಂಗಳದಲ್ಲಿ ಅರಳಿದ ಹನಿ ರಂಗೋಲಿ ಮನದ ಮಾತು ಎಂಬ ಪುಸ್ತಕವನ್ನು ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ಬಾಳಗೌಡ ಪಾಟೀಲ್, ಕಿರಣ್ ಜೀಣಗುಂಡ, ಪೌಲ್ ವೇಗಸ್, ಸುನೀಲ ಕರಡಿಗುದ್ದಿ, …

Read More »

ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿ: ಜಾವೇದ್ ಗೋಕಾಕ

ಗೋಕಾಕ: ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುವುದ ರೊಂದಿಗೆ ಬದುಕು ಸಾರ್ಥಕತೆ ಪಡಿಸಿಕೊಳ್ಳಿ ಎಂದು ಅಂಜುಮನ್ ಏ ಇಸ್ಲಾಂ ಕಮೀಟಿಯ ಚೇರಮನ ಜಾವೇದ್ ಗೋಕಾಕ ಹೇಳಿದರು ಮಂಗಳವಾರದಂದು ನಗರದಲ್ಲಿ ಹಮ್ಮಿಕೊಂಡ ಹಜರತ ಮಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಸಿಹಿ ವಿತರಿಸಿ,ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಇಸ್ಮಾಯಿಲ್ ಜಮಾದಾರ, ಮಹಾಂತೇಶ ಗವಿಮಠ, ಸಲ್ಲಿಂ ಮುಲ್ಲಾ ಇಮ್ರಾಹಿಮ ಮುಲ್ಲಾ, ರಿಯಾಜ ಗೋಕಾಕ, ಖಲೀಲ್ ಗೋಕಾಕ,ಕಯ್ಯೂಮ ಖೈರದಿ, ದಾದಾಪೀರ ಗೋಕಾಕ, …

Read More »

ವಾಲ್ಮೀಕಿ ರಾಮಾಯಣ ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥ: ರಾಹುಲ್ ಜಾರಕಿಹೊಳಿ

ನಿಪ್ಪಾಣಿ ತಾಲೂಕಿನ ಲಖನಾಪೂರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಚಿಕ್ಕೋಡಿ ತಾಲೂಕಿನ ವಾಳಕಿಯಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನಿಪ್ಪಾಣಿ: ತಾಲೂಕಿನ ಲಖನಾಪೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಹಾಗೂ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ …

Read More »