Breaking News

Daily Archives: ಅಕ್ಟೋಬರ್ 22, 2021

ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು:ಪವನ ಮಹಾಲಿಂಗಪುರ

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದಂದು ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ, ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷ ಪವನ ಹು ಮಹಾಲಿಂಗಪುರ ಅವರು ಆಗ್ರಹಿಸಿದ್ದಾರೆ. ಎಲ್ಲ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದೆ. ಚುನಾವಣೆಗಳನ್ನೂ ನಡೆಸಲಾಗುತ್ತಿದೆ. ಆದರೆ, ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸರಕಾರ ಹೇಳುತ್ತಿರುವುದು ಸಮಂಜಸವಲ್ಲ.ಗಡಿನಾಡಿನಲ್ಲಿ ಕನ್ನಡಿಗರ ಸ್ವಾಭಿಮಾನದ ಹಬ್ಬವನ್ನು ವಿಜೃಂಭಣೆಯಿಂದ ನಡೆಸಲು ಅನುವು ಮಾಡಿಕೊಡಬೇಕು. ಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಬೃಹತ್ …

Read More »

ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದ ಯುವ ನಾಯಕ ರಾಹುಲ್ ಜಾರಕಿಹೊಳಿ;ತಂದೆ ಸತೀಶ ಜಾರಕಿಹೊಳಿಯವರಿಗೆ ಸಾಥ್

ಹಾನಗಲ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಇಂದಿನಿಂದ ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹಾನಗಲ್ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತಂದೆ ಸತೀಶ ಜಾರಕಿಹೊಳಿಯವರಿಗೆ ಪುತ್ರ ರಾಹುಲ್ ನೆರವಾಗುತ್ತಿದ್ದಾರೆ. ತಂದೆಯೊಂದಿಗೆ ಎಲ್ಲೆಡೆಯೂ ಪ್ರಚಾರದಲ್ಲಿ ತೊಡಗಿದ್ದಾರೆ. ಯುವ ಮತಗಳನ್ನು ಸೆಳೆಯುತ್ತಿರುವ ರಾಹುಲ್: ರಾಹುಲ್ ಅವರು ಇಂದು ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ, ಅಕ್ಕಿಆಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಕ್ಕಿವಳ್ಳಿ ಗ್ರಾಮ …

Read More »

ಹಾನಗಲ್ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಭರ್ಜರಿ ಪ್ರಚಾರ!

ಹಾನಗಲ್: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಯವರು ರಾಮಜಪವನ್ನು ಬಿಟ್ಟು, ಜನರಿಗೆ ಹಣ ಹಂಚಲು ಶುರು ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಬಿಜೆಪಿಯವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ, ಹಣ ಹಂಚುವ ಮೂಲಕ ಮತ ಪಡೆಯುವ ಸಂಚು ನಡೆಸಿದ್ದಾರೆ. …

Read More »

ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ಮಹರ್ಷಿ ವಾಲ್ಮೀಕಿ : ರಾಹುಲ್ ಜಾರಕಿಹೊಳಿ

ಮೂಡಲಗಿ:”  ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಗ್ರಂಥವು ಜೀವನ ಸಂಘರ್ಷ ಹಾಗೂ ಮಾನವೀಯ ಮೌಲ್ಯಗಳ ಕನ್ನಡಿಯಾಗಿದೆ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ತಾಲ್ಲೂಕಿನ ವಡೆರಹಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿಯವರು ಈ ಗ್ರಂಥದ ಮೂಲಕ ಜಗತ್ತಿಗೆ ಅತ್ಯುತ್ತಮ ಮೌಲ್ಯಗಳ ಸಂದೇಶವನ್ನು ನೀಡಿದ್ದಾರೆ.  ಮಕ್ಕಳಿಗೆ ಬಾಲ ರಾಮಾಯಣ ಹಾಗೂ ಬಾಲ ಮಹಾಭಾರತ ಗ್ರಂಥಗಳನ್ನು ಪರಿಚಯಿಸುವುದರ ಮೂಲಕ …

Read More »