ಗೋಕಾಕ: ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇತ್ತೀಚೆಗೆ ಪ್ರಾಣಿ-ಪಕ್ಷಿ ಸಂಕುಲಗಳ ನೀರಿನ ದಾಹ ನೀಗಿಸಲು ಸತೀಶ ಜಾರಕಿಹೊಳಿ ಫೌಂಡೇಶನದಿಂದ ಯಮಕನಮರಡಿ ಹಾಗೂ ಗೋಕಾಕ ವಿವಿಧ ಕ್ಷೇತ್ರಗಳಲ್ಲಿ ಪಶು-ಪಕ್ಷಿಗಳಿಗಾಗಿ ಕಾಳು ಮತ್ತು ನೀರಿನ ಅರವಟ್ಟಿಗೆ ಅಳವಡಿಸಿ ಗ್ರಾಮಸ್ಥರ ಮೆ ಚ್ಚುಗೆ ಪಾತ್ರರಾಗಿದ್ದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಸಿರುವ ಕಾರ್ಯವನ್ನು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ವಿಕ್ಷಿಸಿದವರು.
ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಗೋಕಾಕ ಹಾಗೂ ಯಮಕನಮರಡಿ ಕ್ಷೇತ್ರದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಅಳವಡಿಸಿದ ಕುಡಿಯುವ ನೀರಿನ ಅರವಟ್ಟಿಗೆಗಳನ್ನುವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಇಂದು ಬೇಸಿಗೆಯಲ್ಲಿ ಪ್ರಾಣಿ ಹಾಗೂ ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರದಾಡುತ್ತಿವೆ. ಇಂಥ ಸಂದರ್ಭದಲ್ಲಿ ಜಾನುವಾರಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವ ಜನರು ಇಂತಹ ಕಾರ್ಯ ಮಾಡಲು ಪಣ ತೊಡಬೇಕು. ಅಲ್ಲದೇ ಇಂತಹ ಕಾರ್ಯ ಎಲ್ಲಡೇ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಜುಬೇರ್ ಮಿರ್ಜಾಭಾಯಿ, ರಾಜು ಮುಲ್ಲಾ, ಪ್ರವೀಣ ಕಳ್ಳೀಮನಿ, ಅಲಿ ನದಾಫ್, ಅರುಣ ಪ್ರೇಮಕುಮಾರ, ಸಾಮ್ರಾಜ್ಯ ಭಜಂತ್ರಿ, ಸತೀಶ್ ಕೊಳಕಿ, ಜುನೇದ್ ಮಿರ್ಜಾಭಾಯಿ, ಪಾಂಡು ಮನ್ನೀಕೇರಿ, ಶಿವು ಪಾಟೀಲ, ರಿಯಾಜ್ ಚೌಗಲಾ ಸೇರಿದಂತೆ ಇತರರು ಇದ್ದರು.
Check Also
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ
ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …