Breaking News

ಕಾರ್ಮಿಕರ ಅರ್ಜಿ ವಿಲೆವಾರಿ ಮಾಡುವುದಕ್ಕೆ ಕಾರ್ಮಿಕ ಅದಾಲತ್ ಸಹಕಾರಿ : ವೆಂಕಟೇಶ ಸಿಂದಿಹಟ್ಟಿ


ಗೋಕಾಕ: ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ನಾನಾ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯುವುದು ಅವಶ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ವತಿಯಿಂದ ಗೋಕಾಕ ನಗರದ ಸಮುದಾಯ ಭವನದಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಅರ್ಜಿ ವಿಲೇವಾರಿ “ಕಾರ್ಮಿಕ ಅದಾಲತ್ “ಕಾರ್ಯಕ್ರಮದಲ್ಲಿ ಕಾರ್ಮಿಕರ ಅರ್ಜಿಗಳನ್ನು ವಿಲೇವಾರಿ ಮಾಡಿ ಮಾತನಾಡಿದ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿಯವರು

ಸರಕಾರ ಕಾರ್ಮಿಕರಿಗೆ ಹಲವಾರು ಸೌಲಬ್ಯಗಳನ್ನು ಜಾರಿಗೊಳಿಸಿದೆ ಆದರೆ ಅವುಗಳ ಉಪಯೋಗ ಕೆಲವು ಕಾರ್ಮಿಕರು ಪಡೆದುಕೊಂಡರೆ ಇನ್ನೂ ಕೆಲವು ಕಾರ್ಮಿಕರು ಅರ್ಜಿ ಹಾಕಿದರು ಸಹ ವಿವಿದ ಲೋಪದೋಷಗಳಿಂದ ಅರ್ಜಿ ವಿಲೆವಾರಿಯಾಗದೆ ಸಿಗಬೇಕಾದ ಸೌಲಬ್ಯಗಳು ದೊರಕದೆ ಕಾರ್ಮಿಕ ಕಚೇರಿಗಳಿಗೆ ಅಲೆದಾಡುತಿದ್ದಾರೆ,

ಇಂತಹ ಪರಿಸ್ಥಿತಿ ಅರಿತ ಸರಕಾರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಬ್ಯಗಳು ಸೀಗಬೇಕು ಬಾಕಿ ಇರುವ ಅರ್ಜಿಗಳ ವಿಲೆವಾರಿ ಆಗಬೇಕೆಂಬ ಉದ್ದೇಶದಿಂದ ಗೋಕಾಕ ತಾಲೂಕಿನಲ್ಲಿ ಹೆಚ್ಚಾಗಿ ಕಟ್ಟಡ ಕಾರ್ಮಿಕರು ಇರುವುದರಿಂದ ಮಾನ್ಯ ಕಾರ್ಮಿಕ ಸಚಿವರ ಆದೇಶದಂತೆ ರಾಜ್ಯದಲ್ಲಿಯೆ ಪ್ರಪ್ರಥಮ ಬಾರಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿ ಕಾರ್ಮಿಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅದರ ಜೊತೆಯಲ್ಲಿ ಸಂಘಟಿತ, ಅಸಂಘಟಿತ ಕಾರ್ಮಿಕರೆಲ್ಲರೂ ಕಾಲ ಕಾಲಕ್ಕೆ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಪಡೆದುಕೊಂಡಲ್ಲಿ ಸರಕಾರದಿಂದ ಸಿಗುವ ನಾನಾ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಬಸವರಾಜ ಆರೆನ್ನವರ ಅವರು ಮಾತನಾಡಿ ಗೋಕಾಕದಲ್ಲಿ ಕಾರ್ಮಿಕ ಅದಾಲತ್ ಹಮ್ಮಿಕೊಂಡಿದ್ದರಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳಲಿಕ್ಕೆ ಬಹಳ ಸಹಕಾರಿಯಾಗಿದೆ.ಇದರಿಂದ ದಿನಾಲು ತಮ್ಮ ಕೆಲಸಗಳನ್ನು ಬಿಟ್ಟು ಕಚೇರಿಗೆ ಅಲೆಯುವುದು ತಪ್ಪಿದೆ.

ಇವತ್ತಿನ ಕಾರ್ಮಿಕ‌ ಅದಾಲತನಲ್ಲಿ ಶೈಕ್ಷಣಿಕ ಸಹಾಯ ಧನದ 450 ಮದುವೆ ಸಹಾಯ ಧನದ 55 ಪಿಂಚಣಿ ಸಹಾಯ ಧನದ 1ವಿಲೆವಾರಿ ಮಾಡಿ ಕೋವಿಡ್ ಸಹಾಯದನ 500 ಅರ್ಜಿಗಳನ್ನು ಸ್ವೀಕರಿಸಿ ಒಟ್ಟು ಬಾಕಿ ಇದ್ದ ಅರ್ಜಿಗಳನ್ನು ಸ್ಥಳದಲ್ಲಿಯೆ ಪರಿಶಿಲಿಸಿ ,ಆಗಿದ್ದ ಲೋಪದೋಷದ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಿ
ಅರ್ಜಿಗಳನ್ನು ವಿಲೇವಾರಿ ಮಾಡಿ ಸ್ಥಳದಲ್ಲಿಯೆ ಮಂಜೂರಾತಿ ಆದೇಶ ನೀಡಲಾಯಿತು

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ತರಣಂ ಬೆಂಗಾಲಿ,ಮಹೇಶ ಕುಳಲಿ ಕಾರ್ಮಿಕ ನಿರೀಕ್ಷಕರಾದ ಪಾಂಡುರಂಗ ಸೇರಿದಂತೆ ,ಸಿಬ್ಬಂದಿಗಳು ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ