ರಾಜ್ಯಾದ್ಯಂತ ವಿವಿಧ ಪರೀಕ್ಷೆಗಳು ಮುಂದುಡಿಕೆ ಮಾಡಿದ್ದಾರೆ, ಆದರೆ VTU ಆಡಳಿತ ಮಂಡಳಿ ಮಾತ್ರ ಪರೀಕ್ಷೆ ಮುಂದೂಡಿಲ್ಲ, ಪರೀಕ್ಷೆ ಮಾಡಲೇಬೇಕೆಂಬ ಹಠಮಾರಿ ಧೋರಣೆ ತೋರುತ್ತಿದೆ.ಎಲ್ಲರಿಗೂ ಒಂದು ರೂಲ್ಸ್ ಆದರೆ VTU ಗೆ ಇನ್ನೊಂದು ರೂಲ್ಸ್ ಅಂತ ಪ್ರತಿಭಾವಂತ ನಾಗರಿಕರ ಮಾತಾಗಿದೆ.
ಮಹಾಮಾರಿ ಕೊರೋನಾ ಹೊಡೆತಕ್ಕೆ ರಾಜ್ಯವೇ ಬೆಚ್ಚಿಬೀಳ್ತಿದೆ. ಇತ್ತ ಕೊರೋನಾ ಕರಿನೆರಳು ಶಿಕ್ಷಣ ಕ್ಷೇತ್ರವನ್ನು ಬಿಟ್ಟಿಲ್ಲ. ಒಂದೆಡೆ ಪೋಷಕರಿಗೆ ಮಕ್ಕಳ ಚಿಂತೆಯಾದ್ರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಚಿಂತೆ. ಈ ನಡುವೆ ಇದನ್ನು ಪರಿಹರಿಸಲು ಶಿಕ್ಷಣ ಇಲಾಖೆ ಕೂಡಾ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದ್ರೆ ಈ ವಿದ್ಯಾರ್ಥಿಗಳು ಮಾತ್ರ ಇನ್ನೂ ಪರೀಕ್ಷೆಯ ಆತಂಕದಲ್ಲೇ ಇದ್ದಾರೆ.
ಸಾವು ಬದುಕಿನ ನಡುವೆ ಹೋರಾಟ ಮಾಡುವಂತಹ ಸ್ಥಿತಿ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗಿ ಹೋಗಿದೆ. ಇದ್ರ ನಡುವೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಠಕ್ಕೆ ಬಿದ್ದು ಪರೀಕ್ಷೆ ನಡೆಸೋದಕ್ಕೆ ಮುಂದಾಗಿದೆ. ಕೊರೋನಾ ನಡುವೆ ನಡೆಸುವ ಪರೀಕ್ಷೆಯಿಂದ ಕೊರೋನಾ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆಯಿದೆ ಅಂತ ವಿದ್ಯಾರ್ಥಿಗಳು ಹೇಳಿದ್ದಾರೆ.
ಹೌದು ರಾಜ್ಯಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ವಿಟಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೊರೋನಾ ಎರಡನೇ ಅಲೆಯಿಂದ ರಾಜ್ಯದ ಹಲವು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಇನ್ನೂ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೊರೋನಾ ಪರಿಸ್ಥಿತಿ ಇಷ್ಟು ತಾರಕ್ಕೆ ಏರಿದ್ರೂ ವಿಟಿಯೂ ಪರೀಕ್ಷೆ ಯಾಕೆ ಮಾಡೋದಕ್ಕೆ ಮುಂದಾಗಿದೆ. ನಮ್ಮ ಜೀವದ ಬಗ್ಗೆ ಕಾಳಜಿ ಇಲ್ವೆ ಎಂದು ವಿದ್ಯಾರ್ಥಿಗಳು ಫುಲ್ ಗರಂ ಆಗಿದ್ದಾರೆ.