ಮೈಸೂರು : ಸ್ವಯಂಕೃತ ಅಪರಾಧಿಂದ ನೀವೂ ಜೈಲು ಪಾಲಾದ್ರಿ. ನಿಮ್ಮ ಕುಟುಂಬ ಮಾಡಿದ ತಪ್ಪಿಗೆ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ್ರಿ. ಇದಕ್ಕಾಗಿ ಬಿಜೆಪಿ ಪಕ್ಷ ನಿಮ್ಮನ್ನ 6 ವರ್ಷ ಉಚ್ಚಾಟನೆ ಮಾಡ್ತು. ಆ ವೇಳೆ ಕೆಜಿಪಿ ಪಕ್ಷ ಕಟ್ಟಿದ್ರಿ, ಈ ವೇಳೆ ಯಾರು ಬಂದ್ರು.? ಯಾವ ಮಠಾಧೀಶರು ನಿಮ್ಮ ಪರವಾಗಿ ನಿಂತ್ರು ಹೇಳಿ.? ಮಠಮಾನ್ಯಗಳು ಸಾಮಾಜಿಕ ಭಾಗವಾಗಬೇಕೆ ಹೊರತು, ಒಬ್ಬ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲಬಾರದು ಎಂಬುದಾಗಿ ಎಂ.ಎಲ್.ಸಿ ವಿಶ್ವನಾಥ್ ಮಠಾಧೀಶರ ವಿರುದ್ಧ ಕಿಡಿಕಾರಿದ್ದಾರೆ.
ನಗರದ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿಮ್ಮಿಂದ ಬಿಜೆಪಿಗೆ 104 ಸ್ಥಾನ ಬಂದಿಲ್ಲ- ಮೋದಿಯಿಂದ ಬಂದದ್ದು.
ಅವರು ಕೊಟ್ಟ ಆಡಳಿತ ನೀವೂ ಕೊಡ್ತಿಲ್ಲ. ನಾವು 17 ಮಂದಿ ಬಿಜೆಪಿಗೆ ಬಂದೇವು. ನಾವೆಲ್ಲರು ವೀರಶೈವ ಲಿಂಗಾಯತರಲ್ಲ. ನಾವೆಲ್ಲರು ಕೂಡ ಬೇರೆ ಬೇರೆ ವರ್ಗದ ಜನರು ಎಂದಿದ್ದಾರೆ.
ಹೈಕಮಾಂಡ್‌ಗಿಂತ ದೊಡ್ಡವರು ಯಾರು ಇಲ್ಲ. ಯಡಿಯೂರಪ್ಪನವರು ಬಂದು ಬಿಜೆಪಿ ಪಕ್ಷವನ್ನು ಕಟ್ಟಿಲ್ಲ. ಬಿಜೆಪಿ ಪಕ್ಷ ಕಟ್ಟಿದ್ದು ಏ.ಕೆ.ಸುಬ್ಬಯ್ಯ, ಶಂಕರಮೂರ್ತಿ ಕಟ್ಟಿದ್ದು. ನೀವೂ 70ರ ದಶಕದಲ್ಲಿ ಮುನ್ಸಿಪಲ್ ಚುನಾವಣೆಗೆ ನಿಂತಿದ್ರಿ. ನೀವೊಬ್ಬರೆ ಪಕ್ಷ ಕಟ್ಟಿಲ್ಲ, ಎಲ್ಲರು ಸೇರಿ ಕಟ್ಟಿದ್ದು ಪಕ್ಷ. ನೀವೂ ಪಕ್ಷ ಕಟ್ಟಿಲ್ಲ, ಪಕ್ಷವನ್ನ ಅಧಿಕಾರಕ್ಕೆ ತಂದರು ಅಷ್ಟೇ. ಅವರ ಹಿತದೃಷ್ಟಿಯಿಂದ, ಜನರ ಹಿತದೃಷ್ಟಿಯಿಂದ ಗೌರವಯುತ ನಿರ್ಗಮನಕ್ಕೆ ಸೂಚಿಸಿದೆ. ಇದಕ್ಕೆ ಮಠಾಧೀಶರು ಕೆಡಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎರಡು ಬಾರಿ ನಿಮಗೆ ಸರಿಯಾದ ನಿರ್ಗಮನ ಆಗಲಿಲ್ಲ. ಈ ಬಾರಿಯು ಹಾಗೆ ಮಾಡಿಕೊಳ್ಳಬೇಡಿ. ಗೌರವಯುತವಾಗಿ ನೀವೂ ಸಿಎಂ ಸ್ಥಾನದಿಂದ ನಿರ್ಗಮಿಸಿ.
ಮಠಾಧೀಶರು ಕೂಡ ಇದಕ್ಕೆ ಅಡ್ಡಗಾಲು ಹಾಕಬಾರದು. ನಡೆದಾಡುವ ದೇವರು ಶಿವಕುಮಾರ್ ಶ್ರೀಗಳನ್ನ ನೋಡಿ. ಯಾವುದೇ ರಾಜಕೀಯಕ್ಕೆ ಅವರು ಆಸ್ಪದವೇ ನೀಡಲಿಲ್ಲ. ಅಂತವರನ್ನ ನೋಡಿ ಜನತಂತ್ರ ವ್ಯವಸ್ಥೆಯಲ್ಲಿ ಕೆಲ ಮಠಾಧೀಶರು ಕಲಿಯಬೇಕಿದೆ ಎಂಬುದಾಗಿ ಮೈಸೂರಿನಲ್ಲಿ ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.
ಯಡಿಯೂರಪ್ಪ ಹೋದರೆ ಬಿಜೆಪಿ ಶೂನ್ಯ ಆಗುತ್ತೆ ಅಂತಾರೆ ಸ್ವಾಮಿಜಿಯೊಬ್ಬರು. ರಾಜ್ಯದಲ್ಲಿ ದಂಗೆ ಆಗುತ್ತೆ ಅಂತಾರೆ. ಯಾವ ದಂಗೆ ಆಗುತ್ತೆ ಸ್ವಾಮಿ ಮೊದಲು ಅದನ್ನ ಹೇಳಿ. ನಿಮ್ಮಲ್ಲಿ ಮಠಾಧೀಶರೊಬ್ಬರು ಮೃತಪಟ್ಟ ನಂತರ ನಿಮ್ಮ ಉತ್ತರಧಿಕಾರಿ ನೇಮಕದಲ್ಲಿ ನಾವು ಪ್ರಶ್ನೆ ಮಾಡುತ್ತೀವಾ? ದಯಮಾಡಿ ಸ್ವಾಮೀಜಿ ಏನು ಮಾತನಾಡದೆ ಸುಮ್ಮನಿರಬೇಕು. ಬಿಎಸ್ವೈ ಅವರ ಬಳಿಕ ನಾವುಗಳು ಕೂಡ ಉತ್ತರಾಧಿಕಾರಿಯಾಗಿರುತ್ತೇವೆ. ಅಂದರೆ ಶಾಸಕರುಗಳು ಮುಂದಿನ ಉತ್ತರಾಧಿಕಾರಿ ಎಂದರು.
ಮೌನ ಮುರಿದು ಯಾಕೆ ಸಿಎಂ ಮಾತಾಡ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಅವರು ಮೌನವಾಗಿದ್ದಾರೆ. ಮೌನವೇ ಆಭರಣ ಎಂದು ಸುಮ್ಮನಾಗಿದ್ದಾರೆ. ಹಾಡಿನ ಮೂಲಕ ಸಿಎಂಗೆ ವ್ಯಂಗ್ಯ ಮಾಡಿದರು. ಈ ಮೂಲಕ ಸುದ್ದಿಗೋಷ್ಠಿಯಲ್ಲಿ ಒಂದು ಸಾಲು ಹಾಲಿ ನಗೆ ಚಟಾಕಿ ಹಾರಿಸಿದರು.