ಬೆಂಗಳೂರು : ಅನರ್ಹರಾಗಿ ಸೋತು ನಾಮನಿರ್ದೇಶನವನ್ನು ಹೆಚ್ ವಿಶ್ವನಾಥ್ ಗೊಂಡಿದ್ದಾರೆ. ಹೀಗಾಗಿ 2021ರವರೆಗೆ ಹೆಚ್ ವಿಶ್ವನಾಥ್ ಸಚಿವರಾಗುವಂತಿಲ್ಲ ಎಂಬುದಾಗಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಿದೆ. ಈ ಮೂಲಕ ಹಳ್ಳಿಹಕ್ಕಿ ಹೆಚ್ ವಿಶ್ವಾನಾಥ್ ಗೆ ಬಿಗ್ ಶಾಕ್ ನೀಡಿದೆ. ಅಲ್ಲದೇ ಆರ್ ಶಂಕರ್, ಎಂ.ಟಿ.ಬಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡೋದಕ್ಕೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಬಿಗ್ ರಿಲೀಫ್ ನೀಡಿದೆ.
ಹೆಚ್ ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ವಿಭಾಗಿಯ ಪೀಠವು, ಹೆಚ್ ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ. ಅನರ್ಹರಾಗಿ, ಸೋತು ನಾಮನಿರ್ದೇಶನಗೊಂಡಿದ್ದಾರೆ.
ವಿಶ್ವನಾಥ್ ಅನರ್ಹತೆಯನ್ನು ಸಿಎಂ ಪರಿಗಣಿಸಬೇಕು. ಕಲಂ 164(1ಬಿ), 361 ಬಿ ಅಡಿ ವಿಶ್ವನಾಥ್ ಅನರ್ಹರು. ಹೀಗಾಗಿ 2021ರವರೆಗೆ ಸಚಿವರಾಗಲು ಅರ್ಹರಲ್ಲ ಎಂಬುದಾಗಿ ಮಹತ್ವದ ಆದೇಶ ನೀಡಿದೆ.
ಇನ್ನೂ ಆರ್.ಶಂಕರ್, ಎಂ.ಟಿ.ಬಿ ನಾಗರಾಜ್ ಅವರು ಚುನಾವಣೆಯಲ್ಲಿ ಆಯ್ಕೆಗೊಂಡು ಎಂ.ಎಲ್ ಸಿ ಆಗಿದ್ದಾರೆ. ಹೀಗಾಗಿ ಅವರಿಗೆ ಸಚಿವರಾಗಲು ಯಾವುದೇ ಅಡೆತಡೆಯಿಲ್ಲ. ಆದ್ರೇ ಹೆಚ್ ವಿಶ್ವನಾಥ್ ನಾಮ ನಿರ್ದೇಶನಗೊಂಡಿರೋದು. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡೋದಕ್ಕೆ ಅನರ್ಹರಾಗಿದ್ದಾರೆ ಎಂಬುದಾಗಿ ಹೈಕೋರ್ಟ್ ವಿಭಾಗೀಯ ಪೀಠವು ಅಭಿಪ್ರಾಯ ಪಟ್ಟಿದೆ. ಈ ಮೂಲಕ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಗೆ ಬಿಗ್ ಶಾಕ್ ನೀಡಿದ್ದರೇ, ಆರ್ ಶಂಕರ್, ಎಂಟಿಬಿ ನಾಗರಾಜ್ ಗೆ ಬಿಗ್ ರಿಲೀಫ್ ನೀಡಿದೆ.