ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಡಿಸೆಂಬರ್ 31ರವೆಗೂ ಬಂದ್ ಆಗಿರಲಿದೆ ಅಂತ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಕಟಣೆ ಹೊರಡಿಸಿದೆ.
ಇದರ ಪ್ರಕಾರ ಕಾರ್ಗೋ ಅಥವಾ ಸರಕು ವಿಮಾನ ಹೊರತುಪಡಿಸಿ, ಕೇಸ್ ಟು ಕೇಸ್ ಬೇಸಿಸ್ ಮೇಲೆ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳನ್ನ ಹೊರತುಪಡಿಸಿ ಬೇರೆ ಯಾವುದೇ ವಿಮಾನ ಭಾರತದಿಂದ ವಿದೇಶಕ್ಕೆ ಹಾರಾಟ ನಡೆಸುವಂತಿಲ್ಲ ಮತ್ತು ವಿದೇಶದಿಂದ ಯಾವುದೇ ವಿಮಾನ ಭಾರತದಲ್ಲಿ ಲ್ಯಾಂಡ್ ಆಗುವಂತಿಲ್ಲ. ಡಿಸೆಂಬರ್ 31ರವರೆಗೆ ಈ ನಿಯಮ ಜಾರಿಯಲ್ಲಿರುತ್ತೆ. ಅಂದ್ಹಾಗೆ ಭಾರತ ಕೆಲವೊಂದು ದೇಶಗಳೊಂದಿಗೆ ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ವಿಮಾನ ಸಂಚಾರ ಆರಂಭಿಸಿದೆ. ಇಂತಹ ವಿಮಾನಗಳು, ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸುತ್ತಿರುವ ವಿಮಾನಗಳು ಮತ್ತು ವಿಶೇಷ ವಿಮಾನಗಳಿಗೆ ಇದರಿಂದ ವಿನಾಯ್ತಿ ನೀಡಲಾಗಿದೆ.