ಬೆಂಗಳೂರು (ಮೇ 30): ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಟಾಪ್ 10ರಲ್ಲಿ ಮೊದಲ ನಾಲ್ಕು Rank ಮಹಿಳೆಯರ ಪಾಲಾಗಿವೆ. ಕನ್ನಡಿಗರು ಸಹ ಸಾಧನೆಗೈದಿದ್ದಾರೆ. ದಾವಣಗೆರೆಯ (Davangere) ಅವಿನಾಶ್ (Avinash) 31ನೇ Rank ಪಡೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಅವಿನಾಶ್ ಅವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದೆ.
ಕರ್ನಾಟಕದ 25 ಅಭ್ಯರ್ಥಿಗಳು ಪಾಸ್
ಈ ಬಾರಿ UPSC ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಪಾಸ್ ಆಗಿದ್ದು, ಅದರಲ್ಲಿ ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬೆನಕ ಪ್ರಸಾದ್ 92, ನಿಖಿಲ್ ಬಿ. ಪಾಟೀಲ್ 139, ವಿನಯ್ ಕುಮಾರ್ ಗಾಡಿಗೆ 151, ಚಿತ್ತರಂಜನ್ 155, ಕೆ. ಮನೋಜ್ ಕುಮಾರ್ 157, ಅಪೂರ್ವ ಬಸೂರ್ 191, ನಿತ್ಯಾ 207, ಮಂಜುನಾಥ್ 219, ರಾಜೇಶ್ ಪೊನ್ನಪ್ಪ 222, ಸಾಹಿತ್ಯ ಆಲದಕಟ್ಟಿ 150, ಕಲ್ಪಶ್ರೀ 291, ಅರುಣಾ 308, ದೀಪಕ್ ರಾಮಚಂದ್ರ ಶೇಠ್ 311ನೇ ರ್‍ಯಾಂಕ್, ಹರ್ಷವರ್ಧನ್ 318, ವಿನಯ್ ಕುಮಾರ್ 352, ಮೇಘನಾ 425, ಸವಿತಾ ಗೋಟ್ಯಾಲ್ 479, ಮೊಹಮ್ಮದ್ ಸಿದ್ದಿಕಿ ಷರೀಫ್ 516, ಚೇತನ್ ಕೆ. 532, ಎನ್.ಎಸ್ ಪ್ರಕಾಶ್ 568, ಪ್ರಶಾಂತ್ ಕುಮಾರ್ 641 ಹಾಗೂ ಸುಚಿನ್ ಕೆ.ವಿ 682ನೇ Rank ಪಡೆದಿದ್ದಾರೆ.
ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್
ಪಂಜಾಬ್‌ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಗಾಮಿನಿ ಸಿಂಗ್ಲಾ, ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ್ದಾರೆ. ಗಾಮಿನಿ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು ಎಂದು ಪ್ರೊಫೆಸರ್ ಸಂಜೀವ್ ಹೇಳಿಕೊಂಡಿದ್ದಾರೆ. ಆಕೆಯ ಸಾಧನೆಗೆ ನಮ್ಮೆಲ್ಲರಿಗೂ ತುಂಬಾ ಹೆಮ್ಮೆ ಇದೆ ಎಂದು ಪಿಇಎಸ್ ಚಂಡೀಗಢ ಕಾಲೇಜನ್ ಪ್ರಾದ್ಯಾಪಕರು ಹೇಳಿಕೊಂಡಿದ್ದಾರೆ.
2ನೇ ಸ್ಥಾನವನ್ನ ಅಂಕಿತಾ ಅಗರ್ವಾಲ್
ಎರಡನೇ ಸ್ಥಾನವನ್ನ ಅಂಕಿತಾ ಅಗರ್ವಾಲ್ ಗಿಟ್ಟಿಸಿಕೊಂಡಿದ್ದು, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿರೋದು ವಿಶೇಷವಾಗಿದೆ. ನಾಲ್ಕನೇ ಸ್ಥಾನದಲ್ಲಿ ಐಶ್ವರ್ಯ ವರ್ಮಾ ಇದ್ದಾರೆ
ಗ್ರೂಪ್ ಎ ಮತ್ತು ಗ್ರೂ ಬಿ ಸ್ಥಾನಕ್ಕಾಗಿ ನೇಮಕ
ಪಟ್ಟಿ 2011ರ ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆ ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಸಂದರ್ಶನ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಮಹತ್ವದ ಪರೀಕ್ಷೆಯಲ್ಲಿ ಪಾಸ್ ಆಗಿರುವ ಒಟ್ಟು 685 ಅಭ್ಯರ್ಥಿಗಳು ಇದೀಗ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರದ ವಿವಿಧ ಸೇವೆ, ಗ್ರೂಪ್ ಎ ಮತ್ತು ಗ್ರೂ ಬಿ ಸ್ಥಾನಕ್ಕಾಗಿ ನೇಮಕ ಆಗಲಿದ್ದಾರೆ.
ಪಾಸ್ ಆದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ
ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿರುವ ಭಾರತದ ಅಭಿವೃದ್ಧಿಯ ಪಯಣದಲ್ಲಿ ನಿಮ್ಮ ಆಡಳಿತಾತ್ಮಕ ವೃತ್ತಿ ಆರಂಭಿಸುತ್ತಿದ್ದೀರಿ. ನಿಮಗೆ ನನ್ನ ಶುಭಾಶಯಗಳು ಎಂದಿದ್ದಾರೆ.
685 ಅಭ್ಯರ್ಥಿಗಳು ಪಾಸ್
ಅಂತಿಮ ಪರೀಕ್ಷೆಯಲ್ಲಿ ಪಾಸ್ ಆಗಿರುವ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, 203 ಇತರೆ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲು 23385271/23381125 /23098543 ನಂಬರ್ಗೆ ಕರೆ ಮಾಡುವಂತೆ ತಿಳಿಸಿದೆ.
CKNEWSKANNADA / BRASTACHARDARSHAN CK NEWS KANNADA