Breaking News

ಅತಿಶೀಘ್ರದಲ್ಲೆ ಗೋಕಾಕ ನಗರದಲ್ಲಿ ಭಗೀರಥ ಪೀಠ ಸ್ಥಾಪನೆ.- ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ.!


ಗೋಕಾಕ: ಗೋಕಾಕ ತಾಲೂಕ ಉಪ್ಪಾರ ಸಂಘದ ಜಮೀನಿನಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಭಗೀರಥ ಪೀಠ ಸ್ಥಾಪನೆ ಕಾಮಗಾರಿಗೆ ಚಾಲನೆ ನೀಡಲಾಗುವದು ಎಂದು ಹೊಸದುರ್ಗದ ಶ್ರೀ ಭಗೀರಥ ಪೀಠದ ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ ಹೇಳಿದರು.

ಅವರು, ನಗರದ ಇಲ್ಲಿಯ ಮಹಾಂತೇಶ ನಗರದ ಹತ್ತಿರವಿರುವ ಗೋಕಾಕ ತಾಲೂಕ ಉಪ್ಪಾರ ಸಂಘದ ಜಮೀನಿನಲ್ಲಿ ಮಠ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಬೆಳಗಾವಿ, ವಿಜಯಪುರ, ಬಾಗಲಕೋಟ ಸೇರಿ ವಿವಿಧ ಜಿಲ್ಲೆಗಳಲ್ಲಿ ಉಪ್ಪಾರ ಸಮಾಜದ ಭಾಂದವರು ವಾಸಿಸುತ್ತಿದ್ದು, ಹೊಸದುರ್ಗದ ಶ್ರೀ ಭಗೀರಥ ಪೀಠಕ್ಕೆ ಆಗಮಿಸಲು ತೊಂದರೆಯಾಗುತ್ತದೆ. ಹೀಗಾಗಿ ಗೋಕಾಕ ನಗರದಲ್ಲಿ ಪೀಠ ಸ್ಥಾಪನೆ ಮತ್ತು ಸಮಾಜದ ಬಾಂಧವರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡುತ್ತಿರುವದಾಗಿ ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಉಪ್ಪಾರ ಸಮಾಜವಿ ಶೈಕ್ಷಣಿಕ, ಸಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗಾಗಿ ಈ ಭಾಗದಲ್ಲಿ ಶ್ರೀ ಭಗೀರಥ ಪೀಠದ ಅವಶ್ಯಕತೆ ಇದೆ. ಅತಿಶೀಘ್ರದಲ್ಲಿ ಪೀಠ ಸ್ಥಾಪನೆ ಮಾಡಿ ಉಪ್ಪಾರ ಸಮಾಜ ಭಾಂದವರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವದು ಎಂದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷರಾದ ಕುಶಾಲ ಗುಡೆನ್ನವರ, ಅಡಿವೆಪ್ಪ ಕಿತ್ತೂರ, ಸಮಾಜದ ಮುಖಂಡರಾದ ಪರಸಪ್ಪ ಚೂನನ್ನವರ, ಭೀಮಶಿ ಭರಮನ್ನವರ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಬಸವರಾಜ ಖಾನಪ್ಪನವರ, ಲಕ್ಷ್ಮಣ ತಳ್ಳಿ, ಯಲ್ಲಪ್ಪ ಸುಳ್ಳನವರ, ಮಾರುತಿ ಜಡೆನ್ನವರ, ಶಿವರುದ್ರಪ್ಪ ಗೋಣಿ, ಮಂಜುನಾಥ ಜಲ್ಲಿ, ಲಕ್ಷ್ಮಣ ಪಾಟೀಲ, ಭೀಮಶಿ ಗೌಡಪ್ಪಗೋಳ, ಅಡಿವೆಪ್ಪ ಬಿಲಕುಂದಿ ಸೇರಿದಂತೆ ಅನೇಕರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ