Breaking News

ಗೋಕಾಕ ತಾಲೂಕಿನ ದಿ.18/06/2021 ರ ವರೆಗೆ ಲಾಕ್ ಡೌನ್ ಮುಂದುವರಿಕೆ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ.


ಗೋಕಾಕ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಿನಾಂಕ: 15.06.2021 ರಿಂದ 18.06.2021 ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು, ಈ ಕೆಳಗಿನ ಷರತ್ತುಗಳು ಅನ್ವಯಿಸುತ್ತವೆ.

 •  ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆವರೆಗೂ ಹಾಗೂ ಸಂಜೆ 6.00 ಗಂಟೆಯಿಂದ 8.00 ಗಂಟೆವರೆಗೂ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

 •  ಬೆಳಿಗ್ಗೆ 6.00 ಗಂಟೆಯಿಂದ ಬೆಳಿಗ್ಗೆ 10.00 ಗಂಟೆವರೆಗೂ ಕಿರಾಣಿ, ದಿನಸಿ, ಬೇಕರಿ, ಸ್ವೀಟ್ ಮಾರ್ಟ್, ಮೀನು ಮತ್ತು ಮಾಂಸ ವ್ಯಾಪಾರಕ್ಕೆ ಅನುಮತಿ ಇದೆ.

 •  ಕಿರಾಣಿ ಮತ್ತು ದಿನಸಿ ವ್ಯಾಪಾರದ ಸಂಬಂಧ 10.00 ಗಂಟೆ ನಂತರ ಹೋಂ ಡೆಲಿವರಿಗೆ ಅವಕಾಶ ಇರುವುದಿಲ್ಲ.

 •  ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆವರೆಗೂ
ಒತ್ತುವ ಗಾಡಿಯಲ್ಲಿ ಕಾಯಿಪಲ್ಲೆ , ಹಣ್ಣು ವ್ಯಾಪಾರಕ್ಕೆ /ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ ತುರ್ತು ವೈದ್ಯಕೀಯ ಸೇವೆಗಳು ನಿರಂತರವಾಗಿ ಇರಲಿದ್ದು, ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇರುತ್ತದೆ.

ಸದರಿ ಅನುಮತಿಸಿದ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೆ/ ಅಗತ್ಯವಲ್ಲದ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಯಾವುದೇ ರೀತಿಯ ನಿಯಮಾವಳಿಗಳ ಉಲ್ಲಂಘನೆ ಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದಲ್ಲದೇ, ಕಾನೂನು ಕ್ರಮಕ್ಕೆ ಅವಕಾಶವಾಗುತ್ತದೆ ಎಂದು ತಿಳಿಸಲಾಗಿದೆ.
 •  ವಾರಾಂತ್ಯ ಕರ್ಪ್ಯು: ಶನಿವಾರ ಮತ್ತು ಭಾನುವಾರ ಇದ್ದು, ಅಂದು ಹಾಲು ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಬೇರೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ