ಗೋಕಾಕ ಜ 22 : ಫೆಬ್ರವರಿ ದಿನಾಂಕ 1,2,3 ಮತ್ತು 4 ರಂದು ನಡೆಯಬೇಕಿದ್ದ 17 ನೇ ಸಾಲಿನ ಶರಣ ಸಂಸ್ಕೃತಿ ಉತ್ಸವವನ್ನು ಕೊರೋನಾ ಹರಡುತ್ತಿರುವದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಮಾರ್ಚ ದಿನಾಂಕ 1,2 ,3 ಮತ್ತು 4 ಕ್ಕೆ ಮುಂದೂಡಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಶುಕ್ರವಾರ ಸಾಯಂಕಾಲ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಅವರು ಮಾತನಾಡಿದರು
ಕಳೆದ 16 ವರ್ಷಗಳಿಂದ ಜನರಲ್ಲಿ ಭಾವೈಕತೆಯೊಂದಿಗೆ ಧರ್ಮ ಜಾಗೃತಿ ಉಂಟು ಮಾಡಿ ಸಮಾಜದ ಹಿತ ಕಾಪಾಡು ನಿಟ್ಟಿನಲ್ಲಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದ್ದು, ರಾಜ್ಯದಲ್ಲಿ ಕೊರೋನಾ ಮಹಾಮಾರಿ ವೇಗವಾಗಿ ಹಬ್ಬುತ್ತಿರುವದರಿಂದ ಸರಕಾರ ಕಾರ್ಯಕ್ರಮಗಳನ್ನು ಆಯೋಜಿಸಲು ಹಲವಾರು ಮಾರ್ಗಸೂಚಿಗಳನ್ನು ನಿಗದಿಪಡಿಸಿದ್ದರಿಂದ ಸದ್ಯಕ್ಕೆ ನಿಗದಿ ಪಡಿಸಿದ ದಿನಾಂಕ ಫೆಬ್ರವರಿ ತಿಂಗಳಲ್ಲಿ ಮಾಡಲು ಉದ್ದೇಶಿಸಿರುವ ಶರಣ ಸಂಸ್ಕೃತಿ ಉತ್ಸವವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದ್ದು, ಬರುವ ಮಾರ್ಚ್ 1,2,3 ಮತ್ತು 4 ನಾಲ್ಕರಂದು ನಡೆಸಲು ತೀರ್ಮಾನಿಸಲಾಗಿದ್ದು, ಶ್ರೀ ಮಠದ ಭಕ್ತಾದಿಗಳು ಸಹಕರಿಸಬೇಕೆಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಉತ್ಸವ ಕಮಿಟಿ ಅಧ್ಯಕ್ಷ ಸಿ.ಎಸ್.ವಾಲಿ, ಮುಖಂಡರುಗಳಾದ ಬಸನಗೌಡ ಪಾಟೀಲ, ಶಂಕರ ಗೋರೋಶಿ ಉಪಸ್ಥಿತರಿದ್ದರು.