Breaking News

ಮಹಿಳೆಯರು ಜೀವಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು : ಕಾಯಕಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಕಿರಣ ಬೇಡಿ


ಗೋಕಾಕ: ಮಹಿಳೆಯರು ಜೀವಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದೆ ನಾಯಕತ್ವವಾಗಿದೆ, ಮಹಿಳೆಯರು ಅಂತಹ ನಾಯಕತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು ಎಂದು ಭಾರತ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಡಾ.ಕಿರಣ ಬೇಡಿ ಹೇಳಿದರು.

ಶುಕ್ರವಾರದಂದು ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 17 ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 17ನೇ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಸಮಾವೇಶ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡರೆ ಮುಂದೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಪಾಲಕರು ಸಹ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಉನ್ನತ ವ್ಯಾಸಂಗ ಮಾಡಿಸಿ ಸಮಾಜದಲ್ಲಿ ಸಾವಲಂಭಿಯಾಗಿ ಬದುಕಲು ಪ್ರೋತ್ಸಾಹಿಸಬೇಕು.

ಸ್ತ್ರೀಯರ ಬೆಳವಣಿಯು ಪುರಷರ ಬೆಳೆವಣಿಗಿಂತ ಕಡಿಮೆ ಇರುವದರಿಂದ ಸ್ತ್ರೀಯ ಇಂದು ಹಿಂದೆ ಉಳಿದಿದ್ದಾರೆ. ಇದನ್ನು ಹೊಗಲಾಡಿಸಲು ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕು‌. ಸ್ತ್ರೀಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದನ್ನು ಅವರಿಗೆ ತೋರಿಸಿಕೊಡು ಕಾರ್ಯ ಶಿಕ್ಷಕ ಮತ್ತು ಪಾಲಕರಿಂದ ಆಗಬೇಕು ಅಂದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯ.

ಮಾನವೀಯತೆ ಧರ್ಮ ಸಮಾಜದಲ್ಲಿ ದೊಡ್ಡ ಧರ್ಮವಾಗಿದೆ. ಆತ್ಮನಿರ್ಭರ ಸಮಾಜ ನಿರ್ಮಾಣ ಮಾಡವಲ್ಲಿ ಶರಣರ ಪಾತ್ರ ಬಹುಮುಖ್ಯವಾಗಿದೆ. ಬಸವಣ್ಣನವರಂತ ಶರಣರು ಕಾಯಕವೇ ಕೈಲಾಸ ಎಂದು ಸಾರಿದ್ದಾರೆ ಅಂತಹ ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾಕರಾಗಬೇಕು ಎಂದು ಹೇಳಿದರು.

 

ಮಹಿಳಾ ಸಮಾವೇಶವನ್ನು ಸಂಸದೆ ಶ್ರೀಮತಿ ಮಂಗಳಾ ಅಂಗಡಿ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸತ್ಕರಿಸಿ,ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಓಲೆಮಠ ಜಮಖಂಡಿಯ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.

ವೇದಿಕೆಯ ಮೇಲೆ ಕಾರ್ಯಕ್ರಮದ ನೇತೃತ್ವ ವಹಿಸಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಡಾ.ವಿಶ್ವನಾಥ್ ಶಿಂದೋಳಿಮಠ, ಯುವ ನಾಯಕಿ ಪ್ರೀಯಾಂಕಾ ಜಾರಕಿಹೊಳಿ , ಸೇವಂತಾ ಮುಚ್ಚಂಡಿಹಿರೇಮಠ, ಸುಸ್ಮೀತಾ ಭಟ್ಟ್ ಉಪಸ್ಥಿತರಿದ್ದರು.

ಶಿಕ್ಷಕರಾದ ಆರ್.ಎಲ್.ಮಿರ್ಜಿ, ಎಸ್.ಕೆ ಮಠದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ