*ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ವತಿಯಿಂದ ಅಲೆಮಾರಿ ಜನಾಂಗದ ಬಡ ಜನರಿಗೆ ಬಟ್ಟೆ ವಿತರಣೆ*
ಗೋಕಾಕ: ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ವತಿಯಿಂದ ಅಲೆಮಾರಿ ಜನಾಂಗದ ಬಡ ಜನರಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕೇವಲ ತುರ್ತು ಸಂದರ್ಭದಲ್ಲಿ ಅಲ್ಲದೆ ಜೀವನದ ಪ್ರತಿ ಹಂತದಲ್ಲೂ ಮಾನವೀಯ ಗುಣಗಳನ್ನು ಅಳವಡಿಕೊಳ್ಳುವುದು ಒಳಿತು. ಈ ಮೂಲಕ ಉತ್ತಮ ಉದಾತ್ತಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಎಂದು ಸಂಸ್ಥೆಯ ನಿರ್ದೇಶಕರಾದ ಬಸವರಾಜ ಜವರಗಿ ಅವರು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ವಾಕ್ಯವಾದ ಮಾನವೀಯತೆಯಿಂದ ಶಾಂತಿಯ ಕಡೆಗೆ ತುರ್ತು ಅವಘಡ ಪ್ರಾಕೃತಿಕ ವಿಕೋಪದಂತ ಸಮಯದಲ್ಲಿ ಜನರ ಜೀವ ರಕ್ಷಣೆ ಮತ್ತು ಆರೋಗ್ಯವನ್ನು ಕಾಪಾಡಲು ಪರಿಹಾರ ಸೇವೆಯನ್ನು ನೀಡುವ ಸಂಸ್ಥೆಯೆ ರೆಡ್ ಕ್ರಾಸ್ ಸಂಸ್ಥೆಯಾಗಿದೆ. ಈ ಸಂಸ್ಥೆಯ ಅಂಗ ಸಂಸ್ಥೆಗಳು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿವೆ. ವೈದ್ಯಕೀಯ ಸಹಾಯ, ರಕ್ತದಾನ, ಆಹಾರ ಉಡುಪುಗಳನ್ನು ನೀಡುವ ಮೂಲಕ ಬಡವರಿಗೆ ರೋಗಿಗಳಿಗೆ ನೆರವಿನ ಹಸ್ತವನ್ನು ಚಾಚುತ್ತದೆ, ಈ ರೆಡ್ ಕ್ರಾಸ್ ಸಂಸ್ಥೆ ಧ್ಯೇಯ ವಾಕ್ಯದಂತೆ ನಮ್ಮ ಚೆನ್ನಬಸವೇಶ್ವರ ವಿದ್ಯಾಪೀಠ ವತಿಯಿಂದ ಬಡ ಜನರಿಗೆ ಉಡುಪುಗಳನ್ನು ನೀಡುವ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಉಪನ್ಯಾಸಕರಾದ ಉಷಾ ವಾಲಿ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಅಡಿವೇಶ ಗವಿಮಠ ಹಾಗೂ ಪ್ರಾಚಾರರಾದ ರಮೇಶ್ ಕುಂಬಾರ, ಶ್ರೀಹರ್ಷ ಪಟ್ಟದಕಲ್ಲು ಉಪಸ್ಥಿತರಿದ್ದರು. ಅಕ್ಷತಾ ಬಸ್ತವಾಡ ಅವರು ವಂದಿಸಿದರು.