ಗೋಕಾಕ:ಸರಕಾರ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಳವಡಿಸಿದ ಬಸವಣ್ಣನವರ ಕುರಿತು ಒಂದು ಪುಟದ ಕಿರು ಬರಹದಲ್ಲಿ ಅವರ ಚರಿತ್ರೆ ಮತ್ತು ಚಾರಿತ್ರ್ಯಗಳಿಗೆ ಧಕ್ಕೆತರುವ ರೀತಿಯಲ್ಲಿ ಇತಿಹಾಸ ತಿರುಚಲಾಗಿದೆ ಅದನ್ನು ಸರಿಪಡಿಸಿ ಪಠ್ಯ ಪುಸ್ತಕ ರಚನಾ ಸಮಿತಿ ಮುಖ್ಯಸ್ಥ ರೋಹಿತ್ ಚಕ್ರವರ್ತಿರ್ಥ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಗೋಕಾಕ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಛೇರಿಯವರೆ ಪಾದಯಾತ್ರೆ ಮಾಡಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
12ನೇ ಶತಮಾನದ ಬಸವಣ್ಣ ಮತ್ತು ಶರಣರ ವಿಚಾರವಾಗಿಯೂ ಪಠ್ಯದಲ್ಲಿ ಹಲವು ದೋಷಗಳಿದ್ದು ಇವುಗಳ ಪರಿಷ್ಕರಿಸಬೇಕು. ಬಸವಣ್ಣವರು ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಲಾಗಿದ್ದು, ಅವರು ಉಪ ನಯನವನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ಹೋದರು ಮುಂದುವರಿದು ಅವರು ಶೈವಗುರುಗಳ ಸಾನಿಧ್ಯದಲ್ಲಿ ದೀಕ್ಷೆಪಡೆದರು ಎಂಬುದನ್ನು ತಪ್ಪಾಗಿ ಬರೆದಿದ್ದು, ಬಸವಣ್ಣನವರು ಯಾವುದೇ ಶೈವಗುರುಗಳಿಂದ ಲಿಂಗ ದೀಕ್ಷೆಪಡೆಯಲಿಲ್ಲ ಅವರಿಗೆ ಅರಿವೆ ಗುರುವಾಗಿತ್ತು. ಇಂತಹ ಹಲವಾರು ತಪ್ಪುಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಲಿಂಗಾಯತ, ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯಗಳ ಬೆಂಬಲದಿಂದ ಅಧಿಕಾರ ಹಿಡಿದವರು ಪುರೋಹಿತ ಶಾಹಿಗೆ ಮನ್ನಣೆ ಹಾಕಿ ಈ ಸಮುದಾಯಗಳ ವೃಕ್ಷದ ಮೂಲ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವದು ವಿಪರ್ಯಾಸವಾಗಿದೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಯುವುದು ಅನಿವಾರ್ಯ ಎಂದು ಶ್ರೀಗಳು ಎಚ್ಚರಿಸಿದ್ದಾರೆ. ಪಠ್ಯ ಪುಸ್ತಕ ರಚನಾ ಸಮಿತಿಯನ್ನು ವಜಾಗೊಳಿಸಿ, ಪಠ್ಯದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಎಂದು ಶ್ರೀಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ನಂತರ ಕಾಂಗ್ರೆಸ್ ಮುಖಂಡ ಅಶೋಕ ಪೂಜೇರಿ ಮಾತನಾಡಿ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡುವ ಅವಶ್ಯಕತೆ ಇಲ್ಲ, ಮಾಡಿದ ಪಠ್ಯ ಪುಸ್ತಕವನ್ನು ಕೂಡಲೆ ವಾಪಸ್ಸು ಪಡೆದು ಅವರ ಎಲ್ಲ ತಿರ್ಮಾನಗಳನ್ನು ರದ್ದು ಮಾಡಿ ಇದಕ್ಕೆ ಇತಿಶ್ರೀ ಹಾಡಬೇಕು,ಕೇವಲ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡಿದರೆ ನಮ್ಮ ಮೂಲ ಉದ್ದೇಶ ಇಡೆರಿವುದಿಲ್ಲ,ಮತ್ತು ಇತಿಹಾಸ ತಿರುಚಿದಂತಾ ವ್ಯವಸ್ಥೆಗೆ ಮಾರ್ಪಾಡು ಸಿಗುವುದಿಲ್ಲ,ಸರಕಾರದವರು ಅಸ್ತಿತ್ವಕ್ಕೆ ಬಂದ ದಿನದಿಂದಲೆ ರದ್ದು ಪಡಿಸುವ ಘೊಷಣೆ ಮಾಡಬೇಕೆಂದು ಒತ್ತಾಯಿಸಿದರು.
ಅದಲ್ಲದೆ ವಿದ್ವಾಂಸರನ್ಬ ನೇಮಿಸುವ ಮೂಲಕ ಸಮಿತಿ ರಚನೆ ಮಾಡಬೇಕು.ವಾಸ್ತವ ಇತಿಹಾಸ ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ ತಹಶಿಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರು ಹಾಗೂ ಅನೇಕ ಸಮಾಜದ ಮುಖಂಡರು ಈ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.