Breaking News

ಬಸವಣ್ಣನವರಿಗೆ ಅವಮಾನ: ಪಠ್ಯ ಸರಿಪಡಿಸಲು ಆಗ್ರಹಿಸಿ ಶನಿವಾರದಂದು ಸರಕಾರಕ್ಕೆ ಮನವಿ : ಮುರುಘರಾಜೇಂದ್ರ ಶ್ರೀ


ಗೋಕಾಕ:ಸರಕಾರ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಳವಡಿಸಿದ ಬಸವಣ್ಣನವರ ಕುರಿತು ಒಂದು ಪುಟದ ಕಿರು ಬರಹದಲ್ಲಿ ಅವರ ಚರಿತ್ರೆ ಮತ್ತು ಚಾರಿತ್ರ್ಯಗಳಿಗೆ ಧಕ್ಕೆತರುವ ರೀತಿಯಲ್ಲಿ ಇತಿಹಾಸ ತಿರುಚಲಾಗಿದೆ ಅದನ್ನು ಸರಿಪಡಿಸಿ ಪಠ್ಯ ಪುಸ್ತಕ ರಚನಾ ಸಮಿತಿ ಮುಖ್ಯಸ್ಥ ರೋಹಿತ್ ಚಕ್ರವರ್ತಿರ್ಥ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶನಿವಾರದಂದು ಮುಂಜಾನೆ 10 ಘಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತಹಶೀಲ್ದಾರ ಕಛೇರಿಗೆ ತೆರಳಿ ಮನವಿ ಅರ್ಪಿಸಲಾಗುವದು. ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲುವಂತೆ ಕೋರಿದರು.

12ನೇ ಶತಮಾನದ ಬಸವಣ್ಣ ಮತ್ತು ಶರಣರ ವಿಚಾರವಾಗಿಯೂ ಪಠ್ಯದಲ್ಲಿ ಹಲವು ದೋಷಗಳಿದ್ದು ಇವುಗಳ ಪರಿಷ್ಕರಿಸಬೇಕು. ಬಸವಣ್ಣವರು ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಲಾಗಿದ್ದು, ಅವರು ಉಪ ನಯನವನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ಹೋದರು ಮುಂದುವರಿದು ಅವರು ಶೈವಗುರುಗಳ ಸಾನಿಧ್ಯದಲ್ಲಿ ದೀಕ್ಷೆಪಡೆದರು ಎಂಬುದನ್ನು ತಪ್ಪಾಗಿ ಬರೆದಿದ್ದು, ಬಸವಣ್ಣನವರು ಯಾವುದೇ ಶೈವಗುರುಗಳಿಂದ ಲಿಂಗ ದೀಕ್ಷೆಪಡೆಯಲಿಲ್ಲ ಅವರಿಗೆ ಅರಿವೆ ಗುರುವಾಗಿತ್ತು. ಇಂತಹ ಹಲವಾರು ತಪ್ಪುಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಲಿಂಗಾಯತ, ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯಗಳ ಬೆಂಬಲದಿಂದ ಅಧಿಕಾರ ಹಿಡಿದವರು ಪುರೋಹಿತ ಶಾಹಿಗೆ ಮನ್ನಣೆ ಹಾಕಿ ಈ ಸಮುದಾಯಗಳ ವೃಕ್ಷದ ಮೂಲ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವದು ವಿಪರ್ಯಾಸವಾಗಿದೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಯುವುದು ಅನಿವಾರ್ಯ ಎಂದು ಶ್ರೀಗಳು ಎಚ್ಚರಿಸಿದ್ದಾರೆ. ಪಠ್ಯ ಪುಸ್ತಕ ರಚನಾ ಸಮಿತಿಯನ್ನು ವಜಾಗೊಳಿಸಿ, ಪಠ್ಯದಲ್ಲಿನ ಲೋಪದೋಷಗಳನ್ನು ಸರಿಪಡಿಸಿ , ರೋಹಿತ್ ಚಕ್ರವರ್ತಿರ್ಥ ಬಂಧಿಸಬೇಕೆಂದು ಶ್ರೀಗಳು ಸರಕಾರವನ್ನು ಆಗ್ರಹಿಸಿದ್ದಾರೆ.

 

ಪತ್ರಿಕಾಗೋಷ್ಠಿಯಲ್ಲಿ ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು, ಕಳ್ಳಿಗುದ್ದಿ ಕಪರಟ್ಟಿಯ ಬಸವರಾಜ ಸ್ವಾಮೀಗಳು, ಮುಖಂಡರಾದ ಬಸನಗೌಡ ಪಾಟೀಲ, ಜಯಾನಂದ ಮುನ್ನವಳ್ಳಿ, ಪ್ರಶಾಂತ್ ಕುರಬೇಟ, ಮಲ್ಲಿಕಾರ್ಜುನ ಈಟಿ ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ