ಗೋಕಾಕ: ಸೂಫಿಗಳು, ಶರಣರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ಸಾಯಂಕಾಲ ಇಲ್ಲಿನ ವಿವೇಕಾನಂದ ನಗರದ ಮುಸ್ಲಿಂ ಸಮಾಜದ ಯುವಕ ಶಕೀಲ ಧಾರವಾಡಕರ ಅವರ ಮನೆಯಲ್ಲಿ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸೂಫಿ ಸಂತರು ದೇಶಾದ್ಯಂತ ಪ್ರವಾಸ ಮಾಡಿ ಮಾನವ ಧರ್ಮವನ್ನು ಕಟ್ಟಿ ಬೆಳೆಸಿದ್ದಾರೆ .
ಶಾಂತಿ, ಸಹಬಾಳ್ವೆ, ಭ್ರಾತೃತ್ವದಿಂದ ಬದುಕುವ ಸಂದೇಶವನ್ನು ಸೂಫಿಗಳು ಪ್ರತಿಪಾದಿಸಿದರೆ, ಸರ್ವರಿಗೂ ಸಮಬಾಳು, ಕಾಯಕ ತತ್ತ್ವ, ದಾಸೋಹ ತತ್ತ್ವ, ಲಿಂಗಸಮಾನತೆ, ಜಾತ್ಯತೀತ ಮಹಿಳಾ ಸ್ವಾತಂತ್ರ್ಯವನ್ನು ಶರಣರು ಪ್ರತಿಪಾದಿಸಿದ್ದಾರೆ ಎಂದರು.
ಮುಸ್ಲಿಂ ಮತ್ತು ಹಿಂದು ಎರೆಡು ಧರ್ಮಗಳನ್ನು ಮಾನವೀಯತೆಯನ್ನು ಬೆಸೆಯು ಕಾರ್ಯಮಾಡಿವೆ ಇದುವೇ ನಿಜವಾದ ಮಾನವ ಬಂದುತ್ವ.
ಎಲ್ಲಾ ಧರ್ಮಗಳು ಮನುಕುಲಕ್ಕೆ ಒಳ್ಳೆಯ ಮಾರ್ಗದರ್ಶನವನ್ನು ಮಾಡಿವೆ ಆ ನಿಟ್ಟಿನಲ್ಲಿ ನಾವೆಲ್ಲರೂ ಬಾಳಿ ಬದುಕಿ ಸುಂದರ ಸದೃಢ ಸಮಾಜವನ್ನು ನಿರ್ಮಿಸಬೇಕಾಗಿದೆ. ಕಳೆದ 16 ವರ್ಷಗಳಿಂದ ಶೂನ್ಯ ಸಂಪಾದನ ಮಠದ ವತಿಯಿಂದ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡ ಸಮಾಜದಲ್ಲಿ ಭಾವೈಕತೆಯನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಇದೇ ಸಂಧರ್ಭದಲ್ಲಿ ಶಕೀಲ ಧಾರವಾಡಕರ ದಂಪತಿಗಳು ಶ್ರೀಗಳಿಗೆ ಸತ್ಕರಿಸಿ ,ಗೌರವಿಸಿದರು.
ಈ ಸಂದರ್ಭದಲ್ಲಿ ಶಕೀಲ ಧಾರವಾಡಕರ, ಶಿವು ಖಣಗಣಿ, ಶಾನವಾಜ ಧಾರವಾಡಕರ, ತವನಪ್ಪ ಬೆನ್ನಾಡಿ, ಶಶಿಧರ ದೇಮಶೇಟ್ಟಿ, ಸಲೀಮ ಡಾಂಗೆ, ಬಸವರಾಜ ಹುಳ್ಳೇರ, ಬಸವರಾಜ ಗೋನಾಳ, ಬಸವರಾಜ ಹಿರೇಮಠ, ಸುಭಾಸ ಸನತಿಪ್ಪಗೋಳ,ಇಸ್ಮಾಯಿಲ್ ಜಮಾದಾರ, ಲಕ್ಕಪ್ಪ ತಹಶೀಲ್ದಾರ, ಸಯ್ಯದ ಪಾಶ್ಚಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು