ಬೆಳಗಾವಿ : 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಅನಾವರಣವಾಯಿತು. ಆಗ ಎಲ್ಲರು ಕಲ್ಯಾಣ ಕೈ ಬಿಸಿ ಕರೆಯುತ್ತಿದೆ ಎಂದು. ಆದರೆ ಇಂದು ಮಠಾಧೀಶರು, ರಾಜಕಾರಣಿಗಳಿಗೆ ಕರ್ತವ್ಯ ಕರೆಯುತ್ತಿದೆ ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದು ಚಿತ್ರದುರ್ಗದ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾಮಠದ ಶರಣರು ಹೇಳಿದರು.
ಅವರು ಗುರುವಾರ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಬಸವಣ್ಣನವರ ಕಾಲದ 12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯ ಅನಾವರಣವಾದಾಗ ಎಲ್ಲರೂ ಕಲ್ಯಾಣ ಕರೆಯುತ್ತಿದೆ ಎಂದರು . ಆದರೆ ಪ್ರಸಕ್ತ ದಿನಮಾನಗಳಲ್ಲಿ ನಾಡಿನ ಜನರು ಕೊರೊನಾ, ಪ್ರವಾಹದಿಂದ ತತ್ತರಿಸಿದ್ದಾರೆ. ಕರ್ತವ್ಯದಲ್ಲಿರುವ ಮಠಾಧೀಶರು, ರಾಜಕಾರಣಿಗಳು ಅವರ ನೆರವಿಗೆ ಧಾವಿಸಬೇಕೆಂದು ಎಂದು ಕರೆ ನೀಡಿದರು.
ಒಂದು ಕಡೆ ಕೊರೊನಾ ಸೃಷ್ಟಿಸಿದ ಅಹಸಾಯಕತೆ, ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಕರ್ನಾಟಕದಲ್ಲಿ ಇನ್ನೂ ಸೋಂಕು ಕಡಿಮೆಯಾಗಿಲ್ಲ. ಅದು ಭೀಕರತೆ ಸೃಷ್ಟಿ ಮಾಡಿತ್ತು. ಅಲ್ಲದೆ ಅತೀಯಾಗಿ ಮಳೆ ಸುರಿದು ನದಿ, ಕೆರೆಗಳು ಹರಿದು, ಊರು ಕೇರೆಗೆ ತೊಂದರೆ ಮಾಡಿರುವುದು ಅಪಾಯವನ್ನು ಉಂಟು ಮಾಡಿದ್ದು ವಿಷಾದನೀಯ ಎಂದರು.
ಕೊರೊನಾ ಸೋಂಕು, ಪ್ರವಾಹದಿಂದ ಮಾನವ ಜೀವನ ತತ್ತರಿಸ ಹೋಗಿದೆ. ತೊಂದರೆಗೊಳಗಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಯಾವ ರೀತಿ ಸಾಂತ್ವಾನ ಹೇಳಬೇಕು. ಅಲ್ಲದೇ ಸಮಾಜದಿಂದ ಕೆಲವು ಪ್ರಶ್ನೆಗಳು ಬರುತ್ತವೆ. ಸಂತರ. ಸ್ವಾಮೀಜಿಗಳ ಕಾರ್ಯವೇನು ಎಂದು. ಆದರೆ ನಾಡಿಗೆ ದುಃಖ, ಸಮಸ್ಯೆಗೆ ಬಂದಾಗ ದೈರ್ಯ ತುಂಬುದು ಜನರಿಗೆ ನಾವು ಆತ್ಮ ಸ್ಥೈರ್ಯ ತುಂಬುದು ಅಗತ್ಯವಾಗಿದೆ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ನಾವು ಎಲ್ಲ ಸಮುಯದಾಯದವರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ಸಾಕಷ್ಟು ತೊಂದರೆಯಾಗಿದೆ. ಇಷ್ಟೊಂದು ಭೀಕರತೆ ಹಿಂದೆದೊಂದು ಆಗಿರಲಿಲ್ಲ. ಕಳೆದ ಎರಡು ವರ್ಷದಿಂದ ಸತತವಾಗಿ ಪ್ರವಾಹ ಆಗುತ್ತಿದೆ.
ಅತಿವೃಷ್ಠಿ, ಕೊರೊನಾ ದಿಂದ ತತ್ತರಿಸುವ ಜನರಿಗೆ ಸಾಂತ್ವಾನ ಹಾಗೂ ಸಹಕಾರ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಊರಿನ ಜನರಿಗೆ ಹಾನಿಯಾಗಿದೆ ಕರ್ತವ್ಯ ಕರೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಅಡಿಬಟ್ಟಿ ಗ್ರಾಮಕ್ಕೆ ಬಂದಿದ್ದೇವೆ ಎಂದರು.
ಶೂನ್ಯಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಅಗ್ರಗಣ್ಯ ಮಠ ಎಂದರೆ ಚಿತ್ರದುರ್ಗದ ಮುರುಘಾಮಠ. ಅದರ ಪೀಠಾಧಿಪತಿಗಳಾದ ಡಾ. ಶ್ರೀ ಶಿವಮೂರ್ತಿ ಶರಣರು ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ತತ್ತರಿಸಿದ ಸಂತ್ರಸ್ತರಿಗೆ ಸಾಂತ್ವಾನ ಹೇಳಲು ಶ್ರೀಗಳು ಆಗಮಿಸಿರುವುದು ಸಂತಸದ ಸಂಗತಿ ಎಂದರು. ಪ್ರಕೃತಿಯ ವಿಕೋಪಕ್ಕೆ ಅಡಿಬಟ್ಟಿ ಗ್ರಾಮಸ್ಥರು ದುಃಖದಲ್ಲಿದ್ದಾರೆ. ಅವರ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಗೋಕಾಕ್ ಶೂನ್ಯ ಸಂಪಾದನಾ ಮಠದ ಮುರಘರಾಜೇಂದ್ರ ಸ್ವಾಮೀಜಿ, ಘಟಪ್ರಭಾದ ಶ್ರೀ. ಮಲ್ಲಿಕಾರ್ಜುನ ಸ್ವಾಮೀಜಿ ಬಿಜೆಪಿ ಮುಖಂಡರಾದ ಬಸವರಾಜ ಕಡಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.