ಗೋಕಾಕ : ಪರಿಣಾಮವಾಗಿ ಬೋಧನೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಿಕ್ಷಕರು ಪರಸ್ಪರ ಸಂವಹನ ಶೀಲರಾಗಬೇಕು ಎಂದು ಧಾರವಾಡದ ಶಿಕ್ಷಣ ತಜ್ಞ ಪ್ರೋ ಸುರೇಶ್ ಕುಲಕರ್ಣಿ ಹೇಳಿದರು.
ರವಿವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶಿಕ್ಷಕರಿಗಾಗಿ ಹಮ್ಮಿಕೊಂಡ ಶಿಕ್ಷಕರಿಗಾಗಿ ಬೋಧನೆಯ ಗುಣಮಟ್ಟ ವೃದ್ಧಿ ಕುರಿತು ಉಪನ್ಯಾಸ ಕಾರ್ಯಾಗಾರವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಅಪಡೇಟ್ ಆಗುವ ಮೂಲಕ ವಿದ್ಯಾರ್ಥಿಗಳಲ್ಲಿನ ತಾಂತ್ರಿಕ ಪರಿಣಿತಿಯನ್ನು ಹೆಚ್ಚುಸುವಂತೆ ಸಲಹೆ ನೀಡಿದರು. ನಿರಂತರ ಕಲಿಕೆ ಮತ್ತು ವ್ಯಾಪಕ ಮೌಲ್ಯ ಮಾಪನದಿಂದಾಗಿ ಮಕ್ಕಳಲ್ಲಿ ಶೈಕ್ಷಣಿಕ ಬೆಳವಣಿಗೆಯಾಗುವದು . ಶಿಕ್ಷಕರು ಬೋಧನೆ ಮಾಡುವದಕ್ಕಿಂತ ಮುಂಚೆ ಪಾಠವನ್ನು ಮೊದಲು ತಾವು ಮನನ ಮಾಡಿಕೊಂಡು ಮಕ್ಕಳಿಗೆ ಬೋಧಿಸಬೇಕು. ಇಂದಿನ ಶಿಕ್ಷಣ ಬೋಧನೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮವಾಗಿ ಬಳಕೆ ಮಾಡಿಕೊಂಡು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಆಧಾರಿತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಅಣಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಪರಸ್ಪರ ಸಂವನ ನಡೆಸಿ ಪರಿಣಾಮಕಾರಿ ಬೋಧನೆ ಮಾಡಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕಾರಿಯಾಗಿ ಒಳ್ಳೆಯ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯರಾದ ದ್ರಾಕ್ಷಾಯಣಿ ಮಠಪತಿ, ಜಗದೀಶ್ ಮುತ್ತನಾಳ ಉಪಸ್ಥಿತರಿದ್ದರು.