ಗೋಕಾಕ: ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಶ್ರೀ ಸಂಗೋಳ್ಳಿ ರಾಯಣ್ಣ ಯುವ ಪೌಂಡೇಶನ್ ಹಾಗೂ ಶ್ರೀರಾಮ ಸೇನಾ ನಗರ ಘಟಕದ ಆಶ್ರಯದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಬಲಿದಾನ ದಿನ ಮತ್ತು ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅಂಬಿರಾವ ಪಾಟೀಲ ಅವರು, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತವನ್ನು ಉತ್ಪಾದಿಸಲು ಆಗುವದಿಲ್ಲ ಅದನ್ನು ದಾನಿಗಳಿಂದಲೇ ಪಡೆಯಬೇಕು. ರಕ್ತದಾನದಿಂದ ಒಂದು ಜೀವವನ್ನು ಉಳಿಸಿದ ಪುಣ್ಯ ರಕ್ತದಾನಿಗೆ ಲಭಿಸುತ್ತದೆ. ಇಂತಹ ಕಾರ್ಯವನ್ನು ಮಾಡುತ್ತಿರುವ ಯುವ ಸಮುದಾಯ ಕಾರ್ಯ ಶ್ಲಾಘನೀಯವಾಗಿದ್ದು ಇತರರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಲಕ್ಷ್ಮಣ ಮುಸಗುಪ್ಪಿ , ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಶ್ರೀರಾಮ ಸೇನೆಯ ಅಧ್ಯಕ್ಷ ರವಿ ಪೂಜಾರಿ ಹಾಗೂ ಶ್ರೀ ಸಂಗೋಳ್ಳಿ ರಾಯಣ್ಣ ಯುವ ಪೌಂಡೇಶನ್ ಹಾಗೂ ಶ್ರೀರಾಮ ಸೇನಾ ಕಾರ್ಯಕರ್ತರು ಉಪಸ್ಥಿತರಿದ್ದರು.