Breaking News

16 ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರುವರಿ 1 ರಿಂದ ಪ್ರಾರಂಭ, “ಕಾಯಕಶ್ರೀ ಪ್ರಶಸ್ತಿಗೆ ಶ್ರೀ ರವಿಶಂಕರ್ ಗುರೂಜಿ” ಆಯ್ಕೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು


ಗೋಕಾಕ ಡಿ 14 : ಪ್ರತಿ ವರ್ಷ ಶ್ರೀ ಮಠದಿಂದ ಕೊಡಮಾಡುವ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ರವಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದಲ್ಲಿ ನಡೆದ 16ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭದ ಪೂರ್ಣಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.

ಶ್ರೀಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ಕಳೆದ 15 ವರ್ಷಗಳಿಂದ ಶ್ರೀಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ನಿಮಿತ್ತ 16 ನೇ ಶರಣ ಸಂಸ್ಕೃತಿ ಉತ್ಸವವನ್ನು ಫೆಬ್ರುವರಿ 1 ರಿಂದ ನಾಲ್ಕು ದಿನಗಳ ಕಾಲ ಶ್ರೀ ಮಠದ ಶ್ರೀ ಚೆನ್ನ ಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಸರಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ಸರಳವಾಗಿ ಆಚರಿಸಲಾಗುವುದು.

ಫೆಬ್ರುವರಿ 1 ರಂದು ನಡೆಯುವ ಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ಜೊತೆಗೆ 1 ಲಕ್ಷ ರೂ ನಗದು ನೀಡಿ ಗೌರವಿಸಲಾಗುವುದು.

ಫೆಬ್ರುವರಿ 2 ರಂದು ನಡೆಯುವ ಯುವ ಗೋಷ್ಠಿಯಲ್ಲಿ ನಾಡಿನ ಖ್ಯಾತ ಪೊಲೀಸ್ ಅಧಿಕಾರಿ ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರು ಭಾಗವಹಿಸಿ .ಯುವಕರಿಗೆ ಮಾರ್ಗದರ್ಶನ ಮಾಡಿಲಿದ್ದು,.

ಫೆಬ್ರುವರಿ 3 ರಂದು ನಡೆಯುವ ಮಹಿಳಾ ಗೋಷ್ಠಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ ಭಾಗವಹಿಸಲಿದ್ದಾರೆ .ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಳೆದ 15 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವನ್ನು ಆಚರಿಸಿಕೊಂಡು ಬರುತ್ತಿದ್ದು, ಶರಣ ಸಂಸ್ಕೃತಿ ಉತ್ಸವವು ಗೋಕಾಕ ತಾಲೂಕಿನ ಹಬ್ಬವಾಗಿ ಪರಿವರ್ತನೆಯಾಗುತ್ತಿದ್ದೆ. ಯುವ ಜನಾಂಗಕ್ಕೆ ಅನುಕೂಲವಾಗುವ ಸದುದ್ದೇಶ ಹಾಗೂ ತಾಲೂಕಿನಲ್ಲಡೆ ಆಧ್ಯಾತ್ಮಿಕ ಚಿಂತನೆ ಹಬ್ಬಲಿ ಎಂಬ ಚಿಂತನೆಯನ್ನು ಇಟ್ಟುಕೊಂಡು ಈ ಉತ್ಸವ ಆಚರಿಸಲಾಗುತ್ತಿದೆ.

ಭಕ್ತಾದಿಗಳು ಈ ಬಾರಿಯು ಸಹ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ ಪ್ರತಿ ವರ್ಷ ಅತ್ಯಂತ ಅರ್ಥ ಗರ್ಭೀತವಾಗಿ ಜರುಗುವ ಶರಣ ಸಂಸ್ಕೃತಿ ಉತ್ಸವ ತಾಲೂಕಿನ ಆಧ್ಯಾತ್ಮಿಕ ವೇದಿಕೆಯಾಗಿ ಹೊರಹೊಮ್ಮಿದೆ.ಕೊರೋನಾ ಆತಂಕವಿರುವ ಕಾರಣ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಸರಕಾರದ ನಿಯಮಗಳನ್ನು ಪಾಲಿಸಿ ಆಚರಿಸೋಣ ಎಂದರು,

ಇದೇ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹಾಗೂ ಕಾರ್ಯದರ್ಶಿಯಾಗಿ ವಿವೇಕ ಜತ್ತಿ ಅವರನ್ನು ಪುನರ್ ಆಯ್ಕೆ ಮಾಡಲಾಯಿತು.

ಬಟಕುರ್ಕಿಯ ಬಸವ ಮಹಾಸ್ವಾಮಿಗಳು ಸಭೆಯ ಸಾನಿಧ್ಯವನ್ನು ವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರುಗಳಾದ ಡಾ.ಸಿ.ಕೆ ನಾವಲಗಿ , ಶಂಕರ ಗರೋಶಿ, ಶಶಿಧರ ದೇಮಶೆಟ್ಟಿ, ಚಂದ್ರಶೇಖರ್ ಕೊಣ್ಣೂರ, ಅಡಿವೆಪ್ಪ ಕಿತ್ತೂರ, ಬಸವರಾಜ ಖಾನಪ್ಪನವರ , ಮಲ್ಲಿಕಾರ್ಜುನ ಈಟಿ, ಪ್ರಕಾಶ ಬಾಗೋಜಿ , ಶಂಕರ ಬೆಳಕೂಡ , ಎಂ.ಡಿ ಚುನಮರಿ ಮಲ್ಲಿಕಾರ್ಜುನ ಬಿರನಗಡ್ಡಿ, ಶಿಕ್ಷಕ ರಮೇಶ ಮಿರ್ಜಿ ಸೇರಿದಂತೆ ಅನೇಕರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ