ಗೋಕಾಕ: ನಗರದ ಶೂನ್ಯ ಸಂಪಾದನಾ ಮಠ ಹಾಗೂ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಭೇಟಿ ನೀಡಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿ, ಮುರುಘರಾಜೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಪ್ರಿಯಾಂಕಾ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, ಆಶೀರ್ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ತೆರಳಿದ ಅವರು, ತಂದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಗೋಕಾಕ ಮತಕ್ಷೇತ್ರದ ಹುಲಿಕಟ್ಟಿ, ಮಕ್ಕಳಗೇರಿ, ಹಿರೇಹಟ್ಟಿ, ಜಮನಾಳ, ಪುಡಲಕಟ್ಟಿ ಗ್ರಾಮಗಳಿಗೂ ಭೇಟಿ ನೀಡಿ, ಮತಯಾಚನೆ ಮಾಡಿದರು. ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರಚಾರದಲ್ಲಿ ಭಾಗವಹಿಸಿದ್ದರು.