ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಕಣ ರಂಗೇರಿದ್ದು, ಕಾಂಗ್ರೆಸ್ ನಿಂದ ಕಣದಲ್ಲಿರುವ ತಂದೆ ಪರ ಮಕ್ಕಳು ಮತ ಬೇಟೆ ಆರಂಭಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ಮಂಗಳಾ ಅಂಗಡಿ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದಾರೆ. ಸತೀಶ್ ಜಾರಕಿಹೊಳಿ ಪರ , ಮಗ ರಾಹುಲ್ ಹಾಗೂ ಮಗಳು ಪ್ರೀಯಾಂಕಾ ಜಾರಕಿಹೊಳಿ ಪ್ರಚಾರ ನಡೆಸಿದ್ದರೇ. ಮತ್ತೊಂದೆಡೆ ಮಂಗಲಾ ಅಂಗಡಿ ಪರ ಮಗಳು ಶ್ರದ್ಧಾ ಅಂಗಡಿ ಪ್ರಚಾರ ನಡೆಸಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಮಂಗಳವಾರ ಕಡಬಗಟ್ಟಿ, ಕನಸಗೇರಿ, ತವಗ, ಕೈತನಾಳ, ಕೈ ಹೊಸೂರ ಗ್ರಾಮಗಳಿಗೆ ತೆರಳಿ, ತಂದೆ ಪರ ಪ್ರಚಾರ ನಡೆಸಿದ್ದಾರೆ. ತಂದೆಯವರು ಹಲವು ವರ್ಷಗಳಿಂದ ಜನ ಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ತಂದೆಗೆ ಮತ ನೀಡಿ, ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಮತ ಕೇಳುತ್ತಿದ್ದಾರೆ.
ಮತ್ತೊಂದೆಡೆ ರಾಹುಲ್ , ನಿನ್ನೆ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮಕ್ಕೆ ತೆರಳಿ ಪ್ರಚಾರ ಕೈಗೊಂಡಿದ್ದರು. ನಮ್ಮ ತಂದೆ ಸತೀಶ್ ಜಾರಕಿಹೊಳಿಯವರ ಜನಪರ ಕಾಳಜಿಗೆ ಮತ ನೀಡಿ ಎಂದು ಮತಯಾಚನೆ ಮಾಡ್ತಿದ್ದಾರೆ. ಮಂಗಳವಾರವೂ ಸಹ ಬೆಳಗಾವಿ ಲೋಕಸಭಾ ಕ್ಷೇತ್ರ ವಿವಿಧ ಗ್ರಾಮಗಳಿಗೆ ತೆರಳಿದ್ದಾರೆ.
ಗಮನ ಸೆಳೆದ ಮಕ್ಕಳ ಪ್ರಚಾರ : ಸತೀಶ್ ಪರ , ಮಗ ರಾಹುಲ್ , ಮಗಳು ಪ್ರಿಯಾಂಕಾ ಹಾಗೂ ಮಂಗಲಾ ಅಂಗಡಿ ಪರ ಶ್ರದ್ಧಾ ಪ್ರಚಾರ ನಡೆಸುತ್ತಿರುವುದು ಕ್ಷೇತ್ರದ ಜನರ ಸೆಳೆದಿದೆ.
ತಂದೆ , ತಾಯಿ ಗೆಲುವಿಗೆ ಮಕ್ಕಳು ಭರ್ಜರಿ ಪ್ರಚಾರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಗಮನ ಸೆಳೆಯುತ್ತಿದೆ. ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಸಹ ತಮ್ಮ ಅಭ್ಯರ್ಥಿಗಳ ಮಕ್ಕಳ ಜೊತೆಯಾಗಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಜನರು ಸಹ ಮತ ನೀಡುವ ಭರವಸೆ ನೀಡುತ್ತಿದ್ದಾರೆ.