ಬೆಳಗಾವಿ : ಮಾರ್ಚ್ 25 ರೊಳಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ಮೋದಿ , ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವನ್ನೇ ಮೊದಲು ಟಾರ್ಗೆಟ್ ಮಾಡಲಿದ್ದೇವೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿ, ಕೇಂದ್ರ ಕೃಷಿ ಕಾಯ್ದೆ, ಮೋದಿ ಅವರು ಏಳು ವರ್ಷದ ಆಡಳಿತ, ತೈಲ ಬೆಲೆ ಏರಿಕೆ, ಖಾಸಗೀಕರಣ , ಸ್ಥಳೀಯವಾಗಿ ಕಳೆದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ರು, ಆದ್ರೆ ಇನ್ನೂ ಸಹ ನೀಡಿಲ್ಲ. ಇವುಗಳ ಮೇಲೆ ಉಪಚುನಾವಣೆಗಳನ್ನು ಎದುರಿಸುತ್ತೇವೆ. ಸರ್ಕಾರವನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತದೆ ಎಂದರು.
ಮಠ, ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಸಮೀಪದಲ್ಲಿ ದೇವಸ್ಥಾನ, ಮಠ ಮಂದಿರಗಳಿಗೆ ಸರ್ಕಾರ ಅನುದಾನ ನೀಡಿದರೆ, ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬಿರುವುದಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲೂ ಕೊಟ್ಟಿದೆ. ಯೂರಪ್ಪ ಸರ್ಕಾರದಲ್ಲೂ ಕೊಟ್ಟಿದೆ. ಹಿಂದೆ ನಾವು ಸಹ ಕೊಟ್ಟಿದ್ದೇವೆ, ಅವ್ರು ಕೊಟ್ಟಿದ್ದಾರೆ. ಇದು ರಾಜಕೀಯ ಅಂತ ಹೇಳಲಿಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಅಭ್ಯರ್ಥಿ ಹೆಸರು ಘೋಷಣೆ ವಿಳಂಬ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ವ್ಯತ್ಯಾಸಗಳು ಇರುತ್ತವೆ. ಅವುಗಳನ್ನು ಸರಿ ಪಡಿಸಬೇಕಾಗುತ್ತದೆ. ಆದ್ದರಿಂದ ಹೆಸರು ಘೋಷಣೆ ಮಾಡಿಲ್ಲ, ಬಿಜೆಪಿ ಪಕ್ಷದವರಿಗೂ ಎಲ್ಲ ಸಿದ್ದ ವಿದೆ. ಆದ್ರು ಸಹ ಅವರು ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಇನ್ನೂ ಸಮಯವಿದೆ. ಮಾರ್ಚ್ 25, ಅಥವಾ 26 ರೊಳಗಾಗಿ ಮಾಡಲಾಗುತ್ತದೆ. ಅಭ್ಯರ್ಥಿ ಹೆಸರು ಘೋಷಣೆ ಬಳಿಕ ಗೆಲುವಿಗೆ ತಂತ್ರಗಳನ್ನು ಮಾಡಲಾಗುತ್ತದೆ. ಚುನಾವಣೆ ಪ್ರಚಾರಕ್ಕೆ ಕೇಂದ್ರ ನಾಯಕರು ಯಾರು ಸಹ ಬರುವುದಿಲ್ಲ. ರಾಜ್ಯ ನಾಯಕರು ಮಾತ್ರ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ನಾಳೆ ದೆಹಲಿಗೆ ತೆರಳುತ್ತೇನೆ : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಕೇಂದ್ರಕ್ಕೆ ಮೂವರು ಹೆಸರುಗಳನ್ನು ಕಳಿಸಲಾಗಿದೆ. ದೆಹಲಿಯಿಂದ ಬುಲಾವ್ ಬಂದಿದ್ದು, ನಾಳೆ ಬೆಂಗಳೂರಿಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಲಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ನನ್ನ ಆಸಕ್ತಿಗಿಂತ, ಹೈಕಮಾಂಡ್ ನಿರ್ಧಾರ ಮುಖ್ಯವಾಗಿರುತ್ತದೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಲಿದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಸಿಡಿ ಪ್ರಕರಣ, ಕಾದು ನೋಡಬೇಕು : ಸಿಡಿ ಪ್ರಕರಣ ಉಪ ಚುನಾವಣೆಗೆ ಪ್ಲಸ್ ಆಗುವುದಿಲ್ಲ, ಮೈನಸ್ ಕೂಡಾ ಆಗುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಏನು ಕೆಲಸಗಳಾಗಿವೆ. ಬಿಜೆಪಿ ಏನು ಕೆಲಸಗಳನ್ನು ಮಾಡಿದ್ದಾರೆ ಎನ್ನುವುದರ ಮೇಲೆ ಚುನಾವಣೆ ನಡೆಯಲಿದೆ. ಜನರು ಸಹ ಜಾಗೃತರಾಗಿದ್ದು, ಕೆಲಸಗಳನ್ನು ನೋಡಿ ಮತಗಳನ್ನು ನೀಡುತ್ತಾರೆ .
ಸಿಡಿ ಪ್ರಕರಣ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಯುವತಿ, ಆರೋಪಿಗಳನ್ನು ಹುಡುಕುತ್ತಿದ್ದಾರೆ. ಆದ್ರೆ ಎಲ್ಲಿದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಇಂದಿಲ್ಲ, ನಾಳೆ ಪತ್ತೆ ಹಚ್ಚಲಿದ್ದಾರೆ. ಯುವತಿ ಬರಬೇಕು, ಅಂದಾಗ ತನಿಖೆಗೆ ಅನುಕೂಲ ಆಗುತ್ತದೆ. ಪೊಲೀಸರು ಬೇರೆ ಬೇರೆ ರಾಜ್ಯಗಳಿಗೆ ಹೋಗಿಯೂ ಸಹ ಹುಡುತ್ತಿದ್ದಾರೆ. ವೇಟ್ ಮಾಡ್ಬೇಕು, ಒತ್ತಾಯ ಮಾಡ್ಲಿಕ್ಕೆ ಆಗೋಲ್ಲ ಎಂದು ತಿಳಿಸಿದರು.
ರಮೇಶ ಜಾರಕಿಹೊಳಿ ಅವರೊಂದಿಗೆ ಇನ್ನುವರೆಗೂ ಮಾತನಾಡಿಲ್ಲ. ನಾಳೆ ಬೆಂಗಳೂರಿಗೆ ಹೋಗುತ್ತೇನೆ. ಅವಕಾಶ ಸಿಕ್ರೆ ಮಾತನಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣನವರ , ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.