ಚಿಕ್ಕೋಡಿ : ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಸವಜ್ಯೋತಿ ಯೂತ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ನಿನ್ನೆ ಚಾಲನೆ ನೀಡಿದರು.
ಬಳಿಕ ರಾಹುಲ್ ಜಾರಕಿಹೊಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕ್ರೀಡೆ ಸೇರಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ತಮ್ಮದೇಯಾದ ಚಾಪು ಮುಡಿಸುತ್ತಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬುವುದನ್ನು ಸಾಭೀತು ಮಾಡುತ್ತಿದ್ದಾರೆ. ಆದ ಕಾರಣ ಮಹಿಳೆಯರು ಹಿಂಜರಿಯದೇ ಕ್ರೀಡೆಯಲ್ಲಿ ಭಾಗವಹಿಸಬೇಕು. ಕಬಡ್ಡಿ ಅಂತಹ ದೇಶಿಯ ಕ್ರೀಡೆಗಳಿಗೆ ಯುವಕರು ಆದ್ಯತೆ ನೀಡಬೇಕು. ಎಂದರು.
ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ,ಕಬಡ್ಡಿ ತನ್ನದೇಯಾದ ಇತಿಹಾಸ ಹೊಂದಿದ್ದು, ದೈಹಿಕ ಹಾಗೂ ಮಾನಸಿಕ ಸಾಮರ್ಥ ವೃದ್ದಿಗೆ ಕಬಡ್ಡಿ ಸಹಕಾರಿಯಾಗಿದೆ ಎಂದು ಹೇಳಿದರು.
ಕಮತೇನಟ್ಟಿಯ ಗುರುದೇವ ದೇವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ಬಸವಜ್ಯೋತಿ ಯೂತ್ ಫೆಡರೇಷನ್ ದಿಂದ ರಾಹುಲ್ ಜಾರಕಿಹೊಳಿ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿ.ಆರ್. ಸಂಗಪ್ಪಗೋಳ, ಈರಗೌಡಾ ಮ ಪಾಟೀಲ, ವೀರಕುಮಾರ ಪಾಟೀಲ, ಮಹಾವೀರ ಮೋಹಿತೆ, ಲಕ್ಷಣರಾವ ಚಿಂಗಳೆ ಸೇರಿದಂತೆ ಗ್ರಾಮಸ್ಥರು ಇದ್ದರು.