ಮೂಡಲಗಿ: “ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯವಿದೆ. ಪ್ರತಿಯೊಬ್ಬರು ಯೋಗವನ್ನು ರೂಢಿಸಿಕೊಳ್ಳಬೇಕು” ಎಂದು ಅಮೃತಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶರಣಸಂಸ್ಕೃತಿ ಉತ್ಸವ, ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಸಿದ್ದಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾತನಾಡಿದರು.
“ಪ್ರತಿದಿನ ಯೋಗ ಮಾಡುವುದರಿಂದ ರೋಗಗಳನ್ನು ದೂರವಿಡಬಹುದು. ಯೋಗದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ” ಎಂದರು.
“ಮಾಟ-ಮಂತ್ರ, ಮೂಢನಂಬಿಕೆಗಳಿಂದ ಜನರು ಹೊರಬರಬೇಕು. ವೈಜ್ಞಾನಿಕ ಚಿಂತನೆಗಳು ಹಾಗೂ ಉತ್ತಮ ಆಲೋಚನೆಗಳನ್ನು ಹೊಂದಿದರೇ ಬದುಕು ಸುಂದರವಾಗುತ್ತದೆ” ಎಂದು ಹೇಳಿದರು.
ರಾಹುಲ್ ಜಾರಕಿಹೊಳಿಗೆ ಅಭಿನಂದನೆ:
ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಹುಲ್ ಅವರನ್ನು ಮಠದ ಪರವಾಗಿ ಗುರುಪ್ರಸಾದ ಸ್ವಾಮೀಜಿ ಹಾಗೂ ಅಮೃತಾನಂದ ಸ್ವಾಮೀಜಿಗಳು ಸತ್ಕರಿಸಿ, ಅಭಿನಂದಿಸಿದರು.
ಮುಖಂಡರಾದ ಪಾಂಡು ಮನ್ನಿಕೇರಿ, ಚಂದ್ರಕಾಂತ ಮೊಡಪ್ಪಗೋಳ, ಸುರೇಶ ಪಾಟೀಲ, ಅಡಿವೆಪ್ಪ ಹಾದಿಮನಿ, ಖಾನಪ್ಪ ಹೊಳಕರ, ಭಗಂವತ ಧರ್ಮಟ್ಟಿ, ನಾಗಪ್ಪ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.