ರಾಯಬಾಗ: ಗ್ರಾಮೀಣ ಭಾಗದ ಕ್ರೀಡಾಪಟುಗಳು ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಬೇಕು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಭಾರತ ದೇಶ ಗುರುತಿಸುವ ಹಾಗೆ ಮಾಡುವ ಶಕ್ತಿ ಈ ಕ್ರೀಡೆಯಲ್ಲಿದೆ ಎಂದು ಕೆಪಿಸಿಸಿ ಕಾರ್ಯಾದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ ಹಾಗೂ ಉಪನಿರ್ದೇಶಕರ ಕಾರ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜುಗಳ 2020-21 ನೇ ಸಾಲಿನ ರಾಯಬಾಗ ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ನಂತರ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡು ಕ್ರೀಡಾ ಧ್ವಜ ನೆರವೆರಿಸಿ ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂದ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಹೆಲಿಕ್ಯಾಪ್ಟರನಲ್ಲಿ ಕುಳಿತು ಸಂಚಾರಿಸುವುದ್ದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ಕಬ್ಬಡಿ ಕ್ರೀಡಾಕೂಟದ ಮೈದಾನದಲ್ಲಿ ಕ್ರೀಡಾ ಪಟುಗಳ ಪರಿಚಯ ಮಾಡಿಕೊಂಡು ಅವರಿಗೆ ಗೆಲುವು ಸಾಧಿಸಲು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ. ಕಾಂಗ್ರೆಸ್ ಮುಂಖಡ ಮಹೇಶ ತಮ್ಮಣ್ಣವರ. ಯಲ್ಲಪ್ಪ ಶಿಂಗೆ. ಪುರಸಭೆ ಅಧ್ಯಕ್ಷರಾದ ಶ್ರೀಮತಿ ಅಂಜಲಿ ಕುಲಿಗೂಡೆ.ಕುಶಾಲ ಶೆಟ್ಟಿ. ಸಿದ್ಧಾರೂಡ ಈಟಿ. ಬಸವರಾಜ ಅಂಜುರೆ. ಪ್ರಾರ್ಚಾರ್ಯರಾದ ಎನ್. ಜಿ. ಹಂಚಿನಾಳ. ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA