ಗೋಕಾಕ: “ಶೌರ್ಯ, ಸಾಹಸಕ್ಕೆ ಮತ್ತೊಂದು ಹೆಸರೇ ಶಿವಾಜಿ” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
“ಶಿವಾಜಿ ಅಪ್ರತಿಮ ವೀರನಾಗಿದ್ದರು. ಅವರು ದೇಶ ಕಂಡ ಸಮರ್ಥ ಆಡಳಿತಗಾರರಾಗಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವಜನಾಂಗ ಅಳವಡಿಸಿಕೊಳ್ಳಬೇಕು” ಎಂದರು.
ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, “ಶಿವಾಜಿ ಮಹಾರಾಜರ ಆಡಳಿತ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರನ್ನು ಒಂದೇ ಜಾತಿ, ಸಮುದಾಯಕ್ಕೆ ಸೀಮೀತಗೊಳಿಸಬಾರದು. ಅವರು ಇಡೀ ದೇಶಕ್ಕೆ ಆದರ್ಶಪ್ರಾಯರಾಗಿದ್ದಾರೆ” ಎಂದು ಹೇಳಿದರು.
ಮುಖಂಡರಾದ ವಿವೇಕ ಜತ್ತಿ, ಪಾಂಡು ಮನ್ನಿಕೇರಿ, ಮಾರುತಿ ಗುಟಗುದ್ದಿ, ಪಾಂಡು ರಂಗಸುಬೆ, ವಿಠ್ಠಲ ಪರಸನ್ನವರ, ಪ್ರಕಾಶ ಬಸಾಪುರೆ, ವಿನೋದ ಡೊಂಗ್ರೆ, ಬರಮನ್ನ ತೋಳಿ, ಬಸು ಪೂಜಾರಿ, ಮಹೇಶ ಚಿಕ್ಕೋಡಿ, ಸುರೇಶ, ನಾಡಗೇರ ಹಾಗೂ ಕಚೇರಿಯ ಸಿಬ್ಬಂದಿ ಇದ್ದರು.