Breaking News

ಕೇಂದ್ರ ಸರ್ಕಾರ ಶೀಘ್ರವೇ ಸಿಲಿಂಡರ್ , ತೈಲ ದರ ಇಳಿಸಲಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ


ಬೆಳಗಾವಿ: ಕೇಂದ್ರ ಸರ್ಕಾರ ಅಡುಗೆ ಅನಿಲ, ತೈಲ ದರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ ನೇತೃತ್ವದಲ್ಲಿ ಶುಕ್ರವಾರ 11 ರಂದು ನಗರದ ಕಾಂಗ್ರೆಸ್‌ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ಧೋರಣೆ, ಬೆಲೆ ಏರಿಕೆಯ ವಿರುದ್ದ ಹಾಗೂ ಭಿತ್ತಿ ಪತ್ರ ಹಿಡಿದು ಮೋದಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್‍ನ ಅಬಕಾರಿ ಸುಂಕವನ್ನು ರೂ.2 ಹೆಚ್ಚಳ ಮಾಡುವುದರ ಮೂಲಕ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ದೂರಿದರು.

 

ತೈಲ ದರ ಏರಿಕೆಯಿಂದಾಗಿ ಬೇರೆ ಎಲ್ಲ ದರಗಳು ಸಹಾ ಏರಿಕೆಯಾಗುತ್ತವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಬದುಕು ಕಷ್ಟಕ್ಕೆ ದೂಡುತ್ತದೆ. ಕೇಂದ್ರ ಸರ್ಕಾರ ಈ ಕೂಡಲೇ ಏರಿಕೆ ಮಾಡಿರುವ ಪೆಟ್ರೋಲ್ ಡಿಸೇಲ್‍ನ ಅಬಕಾರಿ ಸುಂಕದ ದರವನ್ನು ಇಳಿಕೆ ಮಾಡಬೇಕು. ಈ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹಾಗೂ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಆರೋಪಿಸಿದರು.

 

ಯುವಕರು ಕೇಂದ್ರ ಸರ್ಕಾರದ ಜನ ವಿರೋಧಿ ನಡೆಯನ್ನು ಖಂಡಿಸಬೇಕು. ಜನರಿಗೆ ನಾಯ್ಯ ಕೊಡಿಸುವ ಕೆಲಸವನ್ನು ಮಾಡಬೇಕೆಂದು ಇದೇ ವೇಳೆ ರಾಹುಲ್‌ ಜಾರಕಿಹೊಳಿ ಅವರು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ಸದಸ್ಯರಿಗೆ ಸಲಹೆ ನೀಡಿದರು.

 

ಶಾಸಕ ರಾಜು (ಆಸೀಪ್‌)ಸೇಠ ಮಾತನಾಡಿ ಅವರು, ದುರ್ಬಲ ವರ್ಗದವರು ಬೆಲೆ ಏರಿಕೆಯ ಹೊರೆಯನ್ನು ಹೊರುತ್ತಿದ್ದಾರೆ ಮತ್ತು ಇದು ಬಡವರ ವಿರೋಧಿ ಮಾತ್ರವಲ್ಲದೆ ಜನ ವಿರೋಧಿಯೂ ಆಗಿದೆ ಮತ್ತು

ಆದ್ದರಿಂದ ಇದನ್ನು ವಿರೋಧಿಸಿ ಪ್ರತಿಭಟನೆ ಅಗತ್ಯ ಕೇಂದ್ರ ಸರ್ಕಾರ ಜನರ ಕಷ್ಟಗಳಿಗೆ ಧ್ವನಿಯಾಗಬೇಕು ಎಂದು ಹೇಳಿದರು.

 

ಬೆಳಗಾವಿ ಗ್ರಾಮೀಣ ಯುವ ಘಟಕದ ಜಿಲ್ಲಾಧ್ಯಕ್ಷ ಕಾರ್ತೀಕ್‌ ಪಾಟೀಲ್ ಪಾಟೀಲ್ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ ಎಲ್ಲಾ ಬೆಲೆಗಳು ಏರಿಕೆ ಕಂಡಿವೆ. ಸಧ್ಯಕ್ಕೆ ಅಡುಗೆ ಅನಿಲ್‌ ಏರಿಸಿ ಬಡರಿಗೆ ಬರೆಯ ಬರೆ ಎಳೆದಿದೆ. ಈ ದೇಶದಲ್ಲಿ ಕೋಟ್ಯಾಂತರ ಜನರು ಮಧ್ಯಮ ವರ್ಗದವರು ಸರ್ಕಾರ ಅವರ ಸ್ಥಿತಿಗತಿಯನ್ನು ಅರಿತುಕೊಂಡು ಬೆಲೆ ಏರಿಕೆ ಮಾಡಬೇಕಿದೆ. ಎಲ್ಲವನ್ನು ಬಡಜನರು ಬೀದಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ತೈಲ ಬೆಲೆ ಸೇರಿದಂತೆ ಅಡುಗೆ ಅನಿಲ್‌ ಬೆಲೆಯನ್ನು ಶೀಘ್ರವೇ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

 

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ , ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ. ಜೆ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಯುವ ಕಾಂಗ್ರೆಸ್ ಜಿಲಾಧ್ಯಕ್ಷ ಕಾರ್ತೀಕ್‌ ಪಾಟೀಲ್, ರಾಮ ಗುಲ್ಲಿ ಚಿಕ್ಕೋಡಿ ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಅನಿಕೇತ್ ಪಟ್ಟನ್ ಪರಶುರಾಮ ಡಗೆ, ಜಿಪಂ ಸದಸ್ಯ ಮಹಾಂತೇಶ್ ಮಗದುಮ್ಮ, ಯುವ ಕಾಂಗ್ರೆಸ್ ನಾಯಕ ಸಿದ್ದಿಕ್ ಅಂಕಲಗಿ, ರಾಜಾ ಸಲೀಮ್, ಜಿಲ್ಲಾ ಕಾಂಗ್ರೆಸ್ ಯುವ ಸಮಿತಿಯ ಸಾಗರ್ ದಿವಟಗಿ, ಅಕೀಬ್ ಬೇಪಾರಿ, ರಫೀಕ್ ಬನದರ್, ಗೌಸ್ ಗೌಂಡಿ, ಹನುಮಾನ್ ಮುಕಾಶಿ , ಶಾಬಾಜ್ ಮುಜಾವರ್, ಸೈಫ್ ಅಲಿ ಬೇಪಾರಿ, ಜೋಹೈಬ್ ಸಿದ್ಧಿಕಿ, ಅಹ್ಮದ್ ಮಜಗಾಂವಕರ್, ಜುನೇದ್ ಪೀರಜಾದೆ ,ಶ್ಲೋಕ್ ಕಡೋಲಕರ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಸಾವಿರಾರು ಕಾರ್ಯಕರ್ತರಿದ್ದರು.”


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ