ಗೋಕಾಕ: ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಮಾತನಾಡಿ,“ವಿವೇಕನಾಂದರು ಹೊಂದಿರುವ ಜ್ಞಾನವನ್ನು ಮತ್ತೆ ಯಾರೂ ಹೊಂದಿರಲಿಲ್ಲ. ಅದಕ್ಕೆ ಅವರನ್ನು ತಿಳಿದುಕೊಳ್ಳಬೇಕೆಂದರೆ ಮತ್ತೊಬ್ಬ ವಿವೇಕಾನಂದರು ಹುಟ್ಟ ಬೇಕಾಗುತ್ತದೆ” ಎಂದು ಹೇಳಿದರು.
ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಪೂಜ್ಯ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು
ಏಳಿ ಎದ್ದೇಳಿ… ಗುರಿ ಮುಟ್ಟುವ ತನಕ ನಿಲ್ಲದಿರಿ’. ಈ ಸಾಲುಗಳಲ್ಲಿಯೇ ಅದ್ಭುತ ಶಕ್ತಿ ಇದೆ. ಈ ಪದಗಳು ಕಿವಿಗೆ ಬೀಳುತ್ತಿದ್ದಂತೆಯೇ ದೇಹ ಮನಸ್ಸಿನಲ್ಲಿ ವಿದ್ಯುತ್ಸಂಚಾರವಾದಂತಾಗುತ್ತದೆ ಎಂದು ಹೇಳಿದರು.
ನಮ್ಮ ದೇಶ ಕಂಡ ಅಪ್ರತಿಮ ಆಧ್ಯಾತ್ಮಿಕ ನಾಯಕ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮಾತುಗಳಿವುಗಳು. ವಿಶ್ವವನ್ನೇ ಬೆರಗುಗೊಳಿಸಿದ ಮಹಾನ್ ಸಂತರಿವರು. ಅದ್ಭುತ ತತ್ವಜ್ಞಾನಿ, ಸಮಾಜ ಸುಧಾರಕ, ಮಹಾನ್ ದೇಶಭಕ್ತ ಮತ್ತು ಶ್ರೇಷ್ಠ ವಾಗ್ಮಿ ವಿವೇಕಾನಂದರ ಮಾತುಗಳು ಇಂದಿಗೂ ಪ್ರಸ್ತುತ. ಇವರ ಮಾತುಗಳು ಎಲ್ಲರಿಗೂ ಸ್ಫೂರ್ತಿ ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ವ್ಹಿ.ಆರ್.ಪರಸನ್ನವರ, ಬಸವರಾಜ ಜತ್ತಿ, ಪಾಂಡು ರಂಗಸುಭೆ, ವಿನೋದ್ ಡೊಂಗರೆ, ಪ್ರಕಾಶ್ ಬಸ್ಸಾಪುರೆ, ಸುರೇಶ್ ಮುದ್ದಪ್ಪಗೋಳ, ಪ್ರವೀಣ್ ಗುಡ್ಡಾಕಾಯ ಹಾಗೂ ಇತರರು ಇದ್ದರು