ಬೆಳಗಾವಿ : ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧಾನಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ದೂರದೃಷ್ಟಿಯ ನಾಯಕ ಮತ್ತು ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದ ಅವರು ತಮ್ಮ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟಿದ್ದರು. ಭಾರತದ ಪ್ರಗತಿಗೆ ಅವರ ಗಮನಾರ್ಹ ಕೊಡುಗೆಗಳನ್ನು ಎಂದೆಂದಿಗೂ ಗೌರವಿಸಲಾಗುತ್ತದೆ.
ಈ ಕಷ್ಟದ ಸಮಯದಲ್ಲಿ ನನ್ನ ಸಂತಾಪಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ, ಪ್ರೀತಿಪಾತ್ರರು ಮತ್ತು ಅಭಿಮಾನಿಗಳೊಂದಿಗೆ ಇವೆ. ಅವರ ಈ ನೋವಿನಲ್ಲಿ ನಾನೂ ಕೂಡಾ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
Deeply saddened by the loss of Dr. Manmohan Singh Ji, former Prime Minister of India. A visionary leader and celebrated economist, he dedicated his life to the service of the nation and positively impacted countless lives. His remarkable contributions to India’s progress will forever be cherished. My thoughts and prayers are with his family, loved ones, and admirers during this difficult time.
#drmanmohansingh