ಹುಕ್ಕೇರಿ : ಹಿಡಕಲ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿಂದು ರೈತರು ಮತ್ತು ಸಾರ್ವಜನಿಕರ ಒತ್ತಾಯಗಳನ್ನು ಪರಿಗಣಿಸಿ, 15 ದಿನಗಳ ಕಾಲ ನೀರಿನ ಹರಿವನ್ನು ಇನ್ನೂ 5 ದಿನ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಚಿಂಚಲಿ ಮಾಯಕ್ಕಾ ಜಾತ್ರಾ ಮಹೋತ್ಸವಕ್ಕೆ ಸಹ ಅನುಕೂಲ ಕಲ್ಪಿಸುವ ಈ ನಿರ್ಣಯದಿಂದ ಜನರಿಗೆ ಹೆಚ್ಚಿನ ಸಹಾಯವಾಗುವ ನಿರೀಕ್ಷೆಯಿದೆ ಎಂದರು.
ಜಲಾಶಯದ ನಿರ್ವಹಣೆ ಮತ್ತು ಹೂಳೆತ್ತುವ ಕಾರ್ಯಗಳನ್ನು ಶೀಘ್ರ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು
ಈ ವೇಳೆ ಶಾಸಕರಾದ ಜೆ.ಟಿ.ಪಾಟೀಲ, ದುರ್ಯೋಧನ ಐಹೊಳೆ, ಸಿದ್ಧು ಸವದಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.