ಯಮಕನಮರಡಿ: ವಿದ್ಯುತ್ ಅವಘಡದಲ್ಲಿ 13 ಜಾನುವಾರು ಮೃತಪಟ್ಟಿದ್ದು ಜಾನುವಾರುಗಳ ಮಾಲೀಕರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪರಿಹಾರ ಧನದ ಚೆಕ್ ವಿತರಣೆ ಹಾಗೂ ವೈಯಕ್ತಿಕವಾಗಿ 10 ಸಾವಿರ ರೂ ಧನ ಸಹಾಯ ಮಾಡಿದರು.
ಯಮಕನಮರಡಿ ಮತಕ್ಷೇತ್ರದ ಹಳೆ ವಂಟಮೂರ ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಆಕಳು, ಹೋರಿ, ಎಮ್ಮೆ ಸೇರಿದಂತೆ ಒಟ್ಟು 13 ಜಾನುವಾರುಗಳು ಮೃತಪಟ್ಟಿದ್ದಾವೆ.
ಸದರಿ ಜಾನುವಾರುಗಳ ಮಾಲೀಕರಾದ ಮುತ್ತೆಪ್ಪ ಬಸರಗಿ, ಲಕ್ಷ್ಮಣ ಕಿಲಾರಗಿ, ಯಲ್ಲವ್ವಾ ಮಸ್ತಿ ಅವರಿಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ವತಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಸ್ಥಾನಿಕ ಅಭಿಯಂತರರು ಎನ್ ಜೆ ಕಮಲಾಪುರೆ ಹಾಗೂ ಜಾನುವಾರುಗಳ ಮಾಲೀಕರಿಗೆ ಉಪಸ್ಥಿತರಿದ್ದರು.