ಗೋಕಾಕ : ಬೆಂಗಳೂರಿನಲ್ಲಿ ಜ.20ರಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ ರಾಜಭವನ ಚಲೋ’ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ತೆರಳುತ್ತಿದ್ದು, ಅವರು ತೆರಳುವ ವಾಹನಕ್ಕೆ ಸತೀಶ್ ಶುಗರ್ಸ್ ಲಿಮಿಟೆಡ್ ನ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಿದರು.
ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯಿಂದ ದೇಶದ ಅನ್ನದಾತರ ಮೇಲೆ ಹೇರಿದ ಕೃಷಿ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ರೈತರು ದನಿವರಿಯದ ನಿರಂತರ ಹೋರಾಟ ನಡೆಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ಬೆಳಗಾವಿಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.
ಕಾಂಗ್ರೆಸ್ ನಾಯಕರು, ಮುಖಂಡರು , ಕಾರ್ಯಕರ್ತರು ರೈತರಿಗೆ ಬೆಂಬಲ ಸೂಚಿಸಲಿದ್ದಾರೆ. ಜತೆಗೆ ನಾಳೆ ಬೃಹತ್ ಪ್ರತಿಭಟನೆಯ ಬಳಿಕ ಕೃಷಿ ಮಸೂದೆಯನ್ನು ಹಿಂಪಡೆಯುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ತಫಕಿರ, ವಿವೇಕ ಜತ್ತಿ, ಮಾರುತಿ ಗುಟಗುದ್ದಿ, ಕಲ್ಪನಾ ಜೋಶಿ, ಪಾಂಡುರಂಗ ಸೂಬೆ, ವಿಠ್ಠಲ ಪರಸಣ್ಣವರ, ರೆಹಮಾನ್ ಮುಕಾಸಿ, ಇಲಿಯಾಸ್ ಇನಾಮದಾರ್, ಮಂಜುಳಾ ರಾಮಗಾನಟ್ಟಿ ಸೇರಿದಂತೆ ಇತರರು ಇದ್ದರು.