ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ
ಚಿಕ್ಕೋಡಿ: ಚಿಕ್ಕೋಡಿ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕಟ್ಟಡ ರಿಪೇರಿ ಮತ್ತು ನೂತನ ಕೊಠಡಿಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಜನರ ಅಹ್ವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ಅಕಾರಿಗಳು ತಮ್ಮ ಹಂತದಲ್ಲಿ ಆಗುವ ಶಾಲಾ ಕಟ್ಟಡ ರಿಪೇರಿ ಮತ್ತು ಕೊಠಡಿ ನಿರ್ಮಾಣ ಕಾರ್ಯಗಳನ್ನು ಮಾಡಿಕೊಳ್ಳಬೇಕು. ತಮ್ಮಿಂದ ಆಗದೆ ಇರುವ ಕಾರ್ಯಗಳನ್ನು ನನಗೆ ತಿಳಿಸುವಂತೆ ಡಿಡಿಪಿಯ ಬಿ.ಎ.ಮೆಕಣಮರಡಿ ಅವರಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂಸಬೇಕು. ಜನರು ಸರಕಾರಿ ಕಚೇರಿಗೆ ಅಲೆಯುವುದನ್ನು ನಿಲ್ಲಿಸಬೇಕು. ಜನರಿಗೆ ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು.
ಸಾರ್ವಜನಿಕರಿಗೆ ತೊಂದರೆಯಾದರೇ ನಾನು ಸುಮ್ಮನಿರುವುದಿಲ್ಲ. ಅಂತಹ ಅಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಉಪವಿಭಾಗಾಕಾರಿ ಎಸ್.ಎಸ್.ಸಂಪಗಾಂವಿ, ಡಿಎಸ್ಪಿ ಜಿ.ಬಿ.ಗೌಡರ, ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಎಸ್.ಕೋಳೆಕರ, ಎಡಿಎಚ್‌ಓ ಡಾ. ಎಸ್.ಎಸ್.ಗಡೇದ, ತಾ.ಪಂ.ಇಓ ಎಸ್.ಎಸ್.ಕಾದ್ರೋಳಿ, ಮಹಾವೀರ ಮೋಹಿತ, ಪ್ರಭಾಕರ ಕೋರೆ, ಎಚ್.ಎಸ್.ನಸಲಾಪೂರೆ, ರಮೇಶ ಸಿಂದಗಿ, ಡಾ. ಸದಾಶಿವ ಉಪ್ಪಾರ, ಸಿದ್ದಪ್ಪ ರ‍್ಯಾಯಿ, ರಾಜು ಕೋಟಗಿ, ಡಾ. ಸದಾಶಿವ ಉಪ್ಪಾರ, ಎಂ.ಎಸ್.ಹಿಂಡಿಹೊಳಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಹಾಗೂ ಇತರರು ಇದ್ದರು